ಸ್ವಚ್ಛ ಭಾರತ ಅಭಿಯಾನದಡಿ ಸಂಸತ್ತಿನ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ | ಇಲ್ಲದ ಕಸ ಗುಡಿಸಿದ ಸಂಸದೆ ಹೇಮಾ ಮಾಲಿನಿ ಕಾಲೆಳೆದ ಪತಿ, ನಟ ಧರ್ಮೇಂದ್ರ

ನವದೆಹಲಿ[ಜು.17]: ಇತ್ತೀಚೆಗಷ್ಟೇ ಸ್ವಚ್ಛ ಭಾರತ ಅಭಿಯಾನದಡಿ ಸಂಸತ್ತಿನ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಇಲ್ಲದ ಕಸ ಗುಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಆಹಾರವಾಗಿದ್ದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಬಗ್ಗೆ ಅವರ ಪತಿಯೇ ನಯವಾಗಿ ಕಾಲೆಳೆದಿದ್ದಾರೆ.

Scroll to load tweet…

ಈ ಬಗ್ಗೆ ಟ್ವೀಟ್‌ ಮಾಡಿರುವ ಹೇಮಾ ಪತಿ ಹಾಗೂ ಹಿರಿಯ ಬಾಲಿವುಡ್‌ ನಟ ಧರ್ಮೇಂದ್ರ ಅವರು, ‘ಹೇಮಾ ತನ್ನ ಜೀವನದಲ್ಲಿ ಯಾವತ್ತಾದರೂ ಪೊರಕೆ ಹಿಡಿದಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ‘ಹೌದು, ನನಗೂ ಆಕೆ, ಕಸ ಗುಡಿಸುವುದರಲ್ಲಿ ಅನನುಭವಿಯಂತೆ ಕಾಣುತ್ತಾಳೆ’ ಎಂದಿದ್ದಾರೆ.

ಪ್ರಧಾನಿ ಆದೇಶ ಕಣಮ್ಮಾ: ಬೆಳಗ್ಗೆ ಬಂದು ಸಂಸತ್ತು ಗುಡಿಸಿದ ಹೇಮಾ!

Scroll to load tweet…
Scroll to load tweet…

ಈ ಮೂಲಕ ಈಗಾಗಲೇ ಸಾಮಾಜಿಕ ಸಾಕಷ್ಟು ನಗೆ ಪಾಟಿಲಿಗೆ ಗುರಿಯಾಗಿರುವ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ಕಾಲೆಳೆದಿದ್ದಾರೆ.