ಕರೀನಾ ಕಫೂರ್ ಖಾನ್ ತನ್ನ ಫಿಟ್ನೆಸ್‌ನಿಂದಲೇ ಪ್ರಸಿದ್ಧರಾದ ನಟಿ. ಬಾಲಿವುಡ್‌ನಲ್ಲಿ ಸೈಜ್ ಜೀರೋ ಫಿಗರ್ ಕ್ರೇಜ್ ಹುಟ್ಟಿಸಿದ ಶ್ರೇಯಸ್ಸು ಬೇಬೋಗೆ ಸಲ್ಲುತ್ತದೆ. ಇವರು ಜಿಮ್‌ನಲ್ಲಿ ಬೆವರು ಹರಿಸಿದ್ದರ ಪರಿಣಾಮವಾಗಿಯೇ ತೈಮೂರ್ ಅಲಿಗೆ ಜನ್ಮ ನೀಡಿ ಕೆಲವೇ ತಿಂಗಳಲ್ಲಿ ಅವರು ತಮ್ಮನ್ನು ತಾವು ಫಿಟ್ ಮಾಡಿಕೊಂಡಿದ್ದರು. ಸೋನಂ ಕಪೂರ್ ಹಾಗೂ ಸ್ವರಾ ಭಾಸ್ಕರ್ ಜೊತೆಗೆ 'ವೀರೆ ದಿ ವೆಡ್ಡಿಂಗ್' ಸಿನಿಮಾದಲ್ಲೂ ಅವರು ನಟಿಸಿದ್ದು, ಇದು ಅವರ ಕಂ ಬ್ಯಾಕ್ ಸಿನಿಮಾ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸದ್ಯ ಕರೀನಾ ಕಪೂರ್ ಅವರ ಫಿಟ್ನೆಸ್ ವಿಡಿಯೋ ಒಂದು ವೈರಲ್ ಆಗಿದ್ದು, ಅವರು ತಮ್ಮ ವ್ಯಾಯಾಮಕ್ಕೆ ಅದೆಷ್ಟು ಮಹತ್ವ ನೀಡುತ್ತಾರೆ ಎಂಬುವುದು ಇಲ್ಲಿ ಗಮನಿಸಬಹುದಾಗಿದೆ.

ಕರೀನಾ ಜಿಮ್ ಸೆಂಟರ್‌ನಲ್ಲಿ ತನ್ನ ಗೈಡ್ ಹೇಳಿಕೊಟ್ಟಂತೆ ವ್ಯಾಯಾಮ ಮಾಡುತ್ತಾ ಬೆವರು ಹರಿಸುವುದನ್ನು ಗಮನಿಸಬಹುದಾಗಿದೆ. ಇಲ್ಲಿ ಕರೀನಾ ಹಾಗೂ ಸಲ್ಮಾನ್ ಖಾನ್ ನಟಿಸಿದ್ದ 'ಭಜರಂಗಿ ಭಾಯಿಜಾನ್' ಸಿನಿಮಾದ ಹಾಡು ಕೂಡಾ ಕೇಳಿ ಬರುತ್ತಿದೆ. ವ್ಯಾಯಾಮ ಮಾಡುತ್ತಿರುವ ಕರೀನಾ ಕಪೂರ್ ತಮ್ಮ ಗೈಡ್ ನ್ನು ಸಂಪೂರ್ಣವಾಗಿ ಮ್ಯಾಚ್ ಮಾಡಲು ಯತ್ನಿಸುತ್ತಿದ್ದಾರಾದರೂ, ಅವರ ಮುಖದಲ್ಲಿ ಬಳಲಿಕೆ, ಸುಸ್ತು ಎದ್ದು ಕಾಣುತ್ತದೆ. ಈ ವೇಳೆ ಅವರ ಬಾಯಿಯಿಂದ ನೋವುಭರಿತ ಧ್ವನಿ ಕೇಳಿ ಬಂದಿದೆಯದರೂ ಅವರು ವ್ಯಾಯಾಮ ನಿಲ್ಲಿಸದೆ ಮುಂದುವರೆಸಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

 
 
 
 
 
 
 
 
 
 
 
 
 
 
 

A post shared by Kareena Kapoor Khan (@therealkareenakapoor) on Aug 27, 2018 at 6:33am PDT

ವಿಡಿಯೋ ನೋಡಿದರೆ ಸೆಲೆಬ್ರಿಟಿಗಳು ಫಿಟ್ನೆಸ್ ಕಾಪಾಡಲು ಅದೆಷ್ಟು ಕಸರತ್ತು ಮಾಡುತ್ತಾರೆ ಎಂದು ನೋಡಬಹುದು.