ಕೆಫೆ ಗ್ಯಾರೇಜ್‌ಗೆ ಬಂದಳು ಕರಾವಳಿ ಹುಡುಗಿ

entertainment | Tuesday, November 14th, 2017
Suvarna Web Desk
Highlights

ಕಾರುಣ್ಯರಾಮ್ ನಾಯಕಿಯಾಗಿ ಅಭಿನಯಿಸುತ್ತಿರುವ ‘ಕೆಫೆ ಗ್ಯಾರೇಜ್’ ಚಿತ್ರಕ್ಕೆ ಮತ್ತೊಬ್ಬ ಕಲಾವಿದೆ ಎಂಟ್ರಿ ಆಗಿದ್ದಾಳೆ. ಆಕೆ ಕರಾವಳಿ ಮೂಲದ ಹುಡುಗಿ ಸಂಜನಾ ಶೆಟ್ಟಿ. ಚಿತ್ರದಲ್ಲಿನ ಪಾತ್ರ ಮತ್ತು ಅದರ ವಿಶೇಷತೆ ಕುರಿತು ಮಾತನಾಡುತ್ತಾರೆ ಸಂಜನಾ ಶೆಟ್ಟಿ.

‘ನಾನಿಲ್ಲಿ ಸೆಕೆಂಡ್ ಹೀರೋಯಿನ್. ಕೆಫೆ ಗ್ಯಾರೇಜ್ ಓನರ್ ಮಗಳು. ಸಿಂಪಲ್ ಹುಡುಗಿ. ಕಥಾ ನಾಯಕ ಮತ್ತು ನಾಯಕಿ ಅವರದ್ದೇ ಒಂದು ಟ್ರ್ಯಾಕ್. ಆದರೆ ನನಗೂ ಒಬ್ಬ ಬಾಯ್ ಫ್ರೆಂಡ್ ಇರುತ್ತಾನೆ. ಸೆಕೆಂಡ್ ಹೀರೋಯಿನ್ ಆದ್ರು ಒಂಥರಾ ಚೆನ್ನಾಗಿದೆ. ಅಭಿನಯಿಸಲು ಖುಷಿ ಆಗುತ್ತಿದೆ’ ಎನ್ನುತ್ತಾರೆ ಸಂಜನಾ.

ಈ ಸಂಜನಾ ಈಗಷ್ಟೇ ಬೆಳ್ಳಿತೆರೆಗೆ ಬಂದ ಬೆಡಗಿ. ಹುಟ್ಟಿದ್ದು, ಬೆಳೆದಿದ್ದು ಮಂಗಳೂರು. ಬಿಕಾಂ ಪದವಿ ನಂತರ ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ನಟಿ ಆಗಬೇಕೆನ್ನುವ ಆಸೆಯಿಂದ ನಟನೆ, ನೃತ್ಯ ತರಬೇತಿ ಪಡೆದುಕೊಂಡಿದ್ದಾರೆ. ನಟಿ ಆಗುವ ಮೊದಲು ಮಾಡೆಲ್ ಆಗಿ ಮಿಂಚಿದ್ದಾರೆ. ಹಲವು ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿಂದ ‘ಚಮಕ್’ ಮೂಲಕ ಸಿಕ್ಕ ಅವಕಾಶ ಈಗ ‘ಕೆಫೆ ಗ್ಯಾರೇಜ್’ ಗೆ ತಂದು ನಿಲ್ಲಿಸಿದೆ.

ಪವನ್ ರಣಧೀರ್ ‘ಕೆಫೆ ಗ್ಯಾರೇಜ್’ ನಿರ್ದೇಶಕ. ನಾರಾಯಣ್ ಸ್ವಾಮಿ, ಶ್ರೀಧರ್ ಇದರ ನಿರ್ಮಾಪಕರು. (ಕನ್ನಡಪ್ರಭ ಸಿನಿವಾರ್ತೆ)

Comments 0
Add Comment

    ಹೇಗಿದೆ ಇಂದು ತೆರೆಕಂಡ "ಅಬ್ಬೆ ತುಮಕೂರ ಸಿದ್ಧಿಪುರುಷ ವಿಶ್ವಾರಾಧ್ಯರು"?

    video | Friday, April 13th, 2018
    Suvarna Web Desk