ಆದರೆ ಈವರೆಗೂ ಉತ್ತಮ ಗೆಳೆಯರಂತಿದ್ದ ಕಪಿಲ್ ಹಾಗೂ ಸುನಿಲ್ ನಡುವೆ ಇದೀಗ ಕಂದಕವೇರ್ಪಟ್ಟಿದೆ. ಇದಕ್ಕೆ ಕಾರಣವಾಗಿದ್ದು ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ನಡೆದ ಘಟನೆ. ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ವಯ ಕಪಿಲ್ ಶರ್ಮಾ ಹಾಗೂ ಅವರ ಶೋನಲ್ಲಿ ಭಾಗವಹಿಸುವ ಇತರ ಕಲಾವಿದರು ವಿಮಾನದಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಕಪಿಲ್ ಮಧ್ಯ ಸೇವಿಸುತ್ತಿದ್ದು, ಇದೇ ವೇಳೆ ವಿಮಾನ ಸಿಬ್ಬಂದಿ ಇತರರಿಗೆ ಊಟ ನೀಡಿದ್ದರು. ಈ ಸಂದರ್ಭದಲ್ಲಿ ಮಧ್ಯದ ನಶೆಯಲ್ಲಿ ತೇಲಾಡುತ್ತಿದ್ದ ಕಪಿಲ್ ಶರ್ಮಾ 'ನಾನಿನ್ನೂ ಊಟ ಮಾಡಲು ಪ್ರಾರಂಭ ಮಾಡಿಲ್ಲ, ಹೀಗಿರುವಾಗ ನೀವು ಊಟ ಮಾಡಲು ಹೇಗೆ ಸಾಧ್ಯ?. ನಿಮ್ಮನ್ನು ನೀವು ಏನಂದುಕೊಳ್ಳುತ್ತಿದ್ದೀರಿ? ನಿಮ್ಮೆಲ್ಲರನ್ನೂ ನಾನು ಫೇಮಸ್ ಮಾಡಿದ್ದು. ಎಲ್ಲರನ್ನೂ ಶೋದಿಂದ ತೆಗೆದು ಹಾಕಿ ನಿಮ್ಮ ಕರಿಯರ್ ಮುಗಿಸುತ್ತೇನೆ' ಎಂದು ಗುಡುಗಿದ್ದಾರೆ.
'ಸೋನಿ' ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಪಿಲ್ ಶರ್ಮಾ ಶೋ ಜಗತ್ತಿನಾದ್ಯಂತ ಪ್ರಶಂಸೆ ಗಳಿಸಿದೆ. ಈ ಕಾಮಿಡಿ ಶೋ ಬಹುತೇಕರ ಫೇವರಿಟ್ ಇದಕ್ಕೆ ಕಾರಣವಾಗಿದ್ದು ಇಲ್ಲಿ ನಟಿಸುವ ಕಲಾವಿದರಿಂದ. ಕಪಿಲ್ ಶರ್ಮ ಶೋನಲ್ಲಿ ಕೇವಲ ಕಪಿಲ್ ಶರ್ಮಾ ಮಾತ್ರವಲ್ಲದೇ ತನ್ನನ್ನೇ ತಮಾಷೆಯಾಗಿಸಿ ಇತರರನ್ನು ನಗಿಸಿ ಪ್ರಮುಖ ಭೂಮಿಕೆ ನಿಭಾಯಿಸುವ 'ಡಾ. ಮಶೂರ್ ಗುಲ್ಹಾಟಿ'(ಸುನಿಲ್ ಗ್ರೋವರ್) ಕೂಡಾ ಅನೇಕರಿಗೆ ಪ್ರಿಯರು. ಬಹಳಷ್ಟು ಮಂದಿ ಇವರು ಮಾಡುವ ಕಾಮಿಡಿಯನ್ನು ನೋಡಲೆಂದೇ ಕಪಿಲ್ ಶರ್ಮಾ ಶೋವನ್ನು ವೀಕ್ಷಿಸುತ್ತಾರೆ ಎಂದರೆ ತಪ್ಪಾಗುವುದಿಲ್ಲ.
ಆದರೆ ಈವರೆಗೂ ಉತ್ತಮ ಗೆಳೆಯರಂತಿದ್ದ ಕಪಿಲ್ ಹಾಗೂ ಸುನಿಲ್ ನಡುವೆ ಇದೀಗ ಕಂದಕವೇರ್ಪಟ್ಟಿದೆ. ಇದಕ್ಕೆ ಕಾರಣವಾಗಿದ್ದು ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ನಡೆದ ಘಟನೆ. ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ವಯ ಕಪಿಲ್ ಶರ್ಮಾ ಹಾಗೂ ಅವರ ಶೋನಲ್ಲಿ ಭಾಗವಹಿಸುವ ಇತರ ಕಲಾವಿದರು ವಿಮಾನದಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಕಪಿಲ್ ಮಧ್ಯ ಸೇವಿಸುತ್ತಿದ್ದು, ಇದೇ ವೇಳೆ ವಿಮಾನ ಸಿಬ್ಬಂದಿ ಇತರರಿಗೆ ಊಟ ನೀಡಿದ್ದರು. ಈ ಸಂದರ್ಭದಲ್ಲಿ ಮಧ್ಯದ ನಶೆಯಲ್ಲಿ ತೇಲಾಡುತ್ತಿದ್ದ ಕಪಿಲ್ ಶರ್ಮಾ 'ನಾನಿನ್ನೂ ಊಟ ಮಾಡಲು ಪ್ರಾರಂಭ ಮಾಡಿಲ್ಲ, ಹೀಗಿರುವಾಗ ನೀವು ಊಟ ಮಾಡಲು ಹೇಗೆ ಸಾಧ್ಯ?. ನಿಮ್ಮನ್ನು ನೀವು ಏನಂದುಕೊಳ್ಳುತ್ತಿದ್ದೀರಿ? ನಿಮ್ಮೆಲ್ಲರನ್ನೂ ನಾನು ಫೇಮಸ್ ಮಾಡಿದ್ದು. ಎಲ್ಲರನ್ನೂ ಶೋದಿಂದ ತೆಗೆದು ಹಾಕಿ ನಿಮ್ಮ ಕರಿಯರ್ ಮುಗಿಸುತ್ತೇನೆ' ಎಂದು ಗುಡುಗಿದ್ದಾರೆ.
ಈ ಮಾತುಗಳನ್ನು ಕೇಳಿ ಕಪಿಲ್ ಶರ್ಮಾರ ಇಡೀ ತಂಡಕ್ಕೆ ಕೋಪ ಬಂದಿದೆ. ಆದರೂ ಸುನಿಲ್ ಗ್ರೋವರ್ ತನ್ನ ಗೆಳೆಯ 'ಕಪಿಲ್ ನೀನು ಕುಡಿದಿದ್ದೀಯಾ, ಆರಾಮವಾಗಿ ಕುಳಿತುಕೊ' ಎಂದು ಶಾಂತರಾಗಿಸಲು ಪ್ರಯತ್ನಿಸಿದ್ದಾರೆ. ಇದನ್ನು ಕೇಳುತ್ತಿದ್ದಂತೆಯೇ ಕೋಪಗೊಂಡ ಕಪಿಲ್, ಸುನಿಲ್ ಗ್ರೋವರ್ ಕಾಲರ್ ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಶೂ ನಿಂದ ಹೊಡೆದು 'ನೀವೆನಿದ್ದರೂ ನನ್ನಿಂದ ಆಗಿರುವುದು, ಅಂದು ನೀನು ನನ್ನ ತಂಡ ಬಿಟ್ಟು ಹೋಗಿದ್ದಿ ಅಲ್ವಾ? ನನ್ನ ಬಳಿ ವಾಪಾಸ್ ಬರಬೇಕಾಯ್ತು' ಎಂದು ಲೇವಡಿ ಮಾಡಿದ್ದಾರೆ.
ಕಪಿಲ್ ಈ ವರ್ತನೆ ಹಾಗೂ ಮಾತು ಕೇಳಿದ ಸುನಿಲ್ ಇನ್ನು ತಾನು ಈ ತಂಡದಲ್ಲಿದ್ದರೆ ತನಗೇ ಅಪಹಾಸ್ಯ ಮಾಡಿಕೊಂಡಂತೆ ಎಂದು ತಮ್ಮದೇ ಒಂದು ಶೋ ಆಯೋಜಿಸಲಿದ್ದಾರೆ' ಎಂದು ತಿಳಿದು ಬಂದಿದೆ.
ಇದಿಷ್ಟು ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿ. ಇನ್ನು ಇಂತಹುದ್ದೊಂದು ಘಟನೆ ನಡೆದಿದೆ ಎಂದ ಬಳಿಕ ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಟ್ವಿಟರ್ ಅಕೌಂಟ್'ನಿಂದ ಮಾಡಿರುವ ಟ್ವೀಟ್ ಈ ಮಾತುಗಳಿಗೆ ಇನ್ನಷ್ಟು ಬಲ ನೀಡಿದೆ. ಕಪಿಲ್ ತನ್ನ ಅಕೌಂಟ್'ನಿಂದ 'ಉದ್ದೇಶವಿಲ್ಲದೆ ನಾನು ನಿನಗೆ ನೋವುಂಟು ಮಾಡಿದ್ದಕ್ಕೆ ಕ್ಷಮಿಸು. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ನಿನಗೇ ತಿಳಿದಿದೆ. ಈ ಘಟನೆಯಿಂದ ನಾನು ಕೂಡಾ ನೊಂದಿದ್ದೇನೆ' ಎಂದು ಬರೆದುಕೊಂಡಿದ್ದು ಇದನ್ನು ಸುನಿಲ್ ಗ್ರೋವರ್'ಗೆ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಸುನಿಲ್ ಗ್ರೋವರ್ ಕಪಿಲ್ ಶರ್ಮಾಗೆ ಸರಿಯಾದ ಉತ್ತರವನ್ನು ನೀಡುವುದರೊಂದಿಗೆ ಕೆಲವೊಂದು ಸಲಹೆಗಳನ್ನೂ ನೀಡಿದ್ದಾರೆ.
ಇದಾದ ಬಳಿಕ ಯಾವುದೇ ಬೆಳವಣಿಗೆಗಳು ಆಗಿರಲಿಲ್ಲ ಅಲ್ಲದೇ ಯಾರೂ ಈ ಬಗ್ಗೆ ಮಾತನಾಡಿರಲಿಲ್ಲ. ಆದರೆ ಇದೀಗ ಸುನಿಲ್ ಗ್ರೋವರ್ ಸೆಲ್ಫೀ ವಿಡಿಯೋವೊಂದನ್ನು ಶೇರ್ ಮಾಡಿದ್ದು ಇದರಲ್ಲಿ ತಾನು ಬೇರೆ ಒಂದು ಶೋ ಮಾಡುತ್ತಿದ್ದು, ಇದಕ್ಕೆ ನೀವೆಲ್ಲರೂ ಬರಬೇಕು ಎಂದು ಆಮಂತ್ರಣ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಘಟನೆಯ ಬಳಿಕ ಮಧ್ಯದ ನಶೆಯಲ್ಲಿ ಕಪಿಲ್, ಸುನಿಲ್ ಗ್ರೋವರ್'ರೊಂದಿಗೆ ಜಗಳವಾಡಿ ತನ್ನ ಕಾಲಿಗೆ ತಾನೇ ಕೊಡಲಿ ಪೆಟ್ಟು ನೀಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ.