ಕಪಿಲ್ ಶರ್ಮನಿಗೆ ಕೂಡಿಬಂತು ಕಂಕಣ ಭಾಗ್ಯ | ಬಾಲ್ಯದ ಗೆಳತಿ ಗಿನ್ನಿ ಚತ್ರಥ್‌ರನ್ನು ವರಿಸಲಿರುವ ಕಪಿಲ್ ಶರ್ಮ | ಇನ್ಸ್ಟಾಗ್ರಾಮ್‌ನಲ್ಲಿ ಆಮಂತ್ರಣ ಪತ್ರಿಕೆ ಶೇರ್ ಮಾಡಿಕೊಂಡ ಕಪಿಲ್ ಶರ್ಮಾ 

ಬೆಂಗಳೂರು (ನ. 28): ಖ್ಯಾತ ನಿರೂಪಕ, ಕಾಮಿಡಿಯನ್ ಕಪಿಲ್ ಶರ್ಮಾಗೆ ಕಂಕಣ ಬಲ ಕೂಡಿ ಬಂದಿದೆ. ಬಹುಕಾಲದ ಗೆಳತಿ ಗಿನ್ನಿ ಚತ್ರಥ್ ಜೊತೆ ಹಸೆಮಣೆ ಏರಲಿದ್ದಾರೆ ಕಪಿಲ್ ಶರ್ಮಾ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ನನ್ನ ಸ್ನೇಹಿತೆ ಗಿನ್ನಿ ಚತ್ರಥ್ ಹಾಗೂ ನಾನು ವಿವಾಹವಾಗುತ್ತಿದ್ದೇವೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಮುಂದಿನ ತಿಂಗಳು ಅಂದರೆ ಡಿಸಂಬರ್ 12 ರಂದು ಹಸೆಮಣೆ ಏರಲಿದ್ದೇವೆ. ನಮ್ಮ ಪ್ರೀತಿಗೆ ಶುಭ ಹಾರೈಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು‘ ಎಂದು ಕಪಿಲ್ ಶರ್ಮಾ ಹೇಳಿದ್ದಾರೆ. 

ಮದುವೆ ಸಮಾರಂಭ ಜಲಂದರ್ ನಲ್ಲಿ ನಡೆಯಲಿದ್ದು ಮುಂಬೈ ಹಾಗೂ ಪಂಜಾಬ್ ನಲ್ಲಿ ಆರತಕ್ಷತೆ ನಡೆಯಲಿದೆ. 

ಗಿನ್ನಿ ನನ್ನ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಾಳೆ. ಎಲ್ಲಾ ಸಂದರ್ಭದಲ್ಲೂ ಸಪೋರ್ಟ್ ಮಾಡುತ್ತಾಳೆ. ನಾವು ಸಾಮಾಜಿಕ ಜೀವನದಲ್ಲಿರುವವರು ಈವೆಂಟ್ ಗಳು, ಕಾರ್ಯಕ್ರಮಗಳು ಎಂದು ಹೊರಗಡೆ ಇರುವುದೇ ಜಾಸ್ತಿ. ಮನೆಗೆ ಬಂದರೆ ಮನೆ ಖಾಲಿ ಹೊಡೆಯುತ್ತಾ ಇರುತ್ತದೆ. ಆಗ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವವರು ಬೇಕೆನಿಸುತ್ತದೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. 

View post on Instagram