ಗೂಸ ತಿಂದವನು ಪಿಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀರಾ೦ಪುರ ನಿವಾಸಿ ಸ೦ತೋಷ್. ಈತ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳದಿದ್ದರೂ ತಮಿಳರ ಪರವಾಗಿ ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡುತ್ತಿದ್ದ.
ಬೆಂಗಳೂರು(ಸೆ.10): ಕನ್ನಡ ಸಿನಿಮಾ ನಾಯಕ ನಟರನ್ನು ನಿ೦ದಿಸಿ ಹಿಯಾಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಯುವಕನಿಗೆ ಕನ್ನಡಿಗರು ಸಖತ್ ಗೂಸಾ ಕೊಟ್ಟಿದ್ದಾರೆ.
ಗೂಸ ತಿಂದವನು ಪಿಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀರಾ೦ಪುರ ನಿವಾಸಿ ಸ೦ತೋಷ್. ಈತ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳದಿದ್ದರೂ ತಮಿಳರ ಪರವಾಗಿ ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡುತ್ತಿದ್ದ. ಅಲ್ಲದೆ ಕನ್ನಡದ ಸ್ಟಾರ್ ನಟರಾದ ಶಿವರಾಜ್ ಕುಮಾರ್, ದರ್ಶನ್, ದುನಿಯಾ ವಿಜಿ ಅವರ ಪೋಸ್ಟ್'ಗಳನ್ನು ಅವಮಾನವಾಗುವಂತೆ ಫೋಟೊಶಾಪ್'ನಲ್ಲಿ ಎಡಿಟ್ ಮಾಡಿ ಫೇಸ್'ಬುಕ್'ನಲ್ಲಿ ಹಾಕುತ್ತಿದ್ದ. ಇ೦ದು ಈ ಪೋಸ್ಟ್'ಗಳನ್ನು ಗಿರಿನಗರದ ಯುವಕರು ಕಂಡು ಈತನಿಗಾಗಿ ಹುಡುಕಾಡಿ ಕರೆ'ತಂದು ಯಾಕೆ ಈ ರೀತಿ ಮಾಡತ್ತಿದ್ದಿಯಾ ಎ೦ದು ಕೇಳಿದ್ದಾರೆ. ಈ ರೀತಿ ಕೇಳಿದಾಗಲು ಆತ ನಾನು ತಮಿಳಿನವನು ನನ್ನಿಷ್ಟ ಎ೦ದು ಅಹ೦ಕಾರದಿ೦ದ ಮಾತಾನಾಡಿದ್ದಾನೆ. ಇದರಿಂದ ಕೋಪಗೊಂಡ ಯುವಕರು ಸ್ಥಳದಲ್ಲಿಯೇ ಗೂಸ ಕೊಟ್ಟಿದ್ದಾರೆ ಜೊತೆಗೆ ಕ್ಷಮೆಯಾಚಿಸುವಂತೆ ಮಾಡಿದ್ದಾರೆ.
