ವಾಣಿಜ್ಯ ತೆರಿಗೆ ಇಲಾಖೆಗೆ ಸಂಬಂಸಿದಂತೆ ಕರ್ನಾಟಕ ಮನರಂಜನಾ ತೆರಿಗೆ ಕಾಯ್ದೆ-1958ರ ಪ್ರಕರಣ 3-ಸಿ ಅನ್ವಯ ಕನ್ನಡ, ಕೊಡವ, ಕೊಂಕಣಿ, ತುಳು ಮತ್ತು ಬಂಜಾರಾ ಭಾಷೆಯ ಚಲನಚಿತ್ರ ಪ್ರದರ್ಶನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ

ಬೆಳಗಾವಿ(ಡಿ.2): ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳೂ ಪ್ರತಿ ವರ್ಷ 12 ವಾರಗಳಿಗೆ ಕಡಿಮೆ ಇಲ್ಲದಂತೆ ಕನ್ನಡ ಚಲನಚಿತ್ರ ಪ್ರದರ್ಶಿಸಬೇಕೆಂಬ ನಿಬಂಧನೆಯನ್ನು ಪರವಾನಗಿಯಲ್ಲಿ ನಮೂದಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನ ಪರಿಷತ್ತಿನಲ್ಲಿ ಗುರುವಾರ ರಾಮಚಂದ್ರಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ವಾಣಿಜ್ಯ ತೆರಿಗೆ ಇಲಾಖೆಗೆ ಸಂಬಂಸಿದಂತೆ ಕರ್ನಾಟಕ ಮನರಂಜನಾ ತೆರಿಗೆ ಕಾಯ್ದೆ-1958ರ ಪ್ರಕರಣ 3-ಸಿ ಅನ್ವಯ ಕನ್ನಡ, ಕೊಡವ, ಕೊಂಕಣಿ, ತುಳು ಮತ್ತು ಬಂಜಾರಾ ಭಾಷೆಯ ಚಲನಚಿತ್ರ ಪ್ರದರ್ಶನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದರು.

ಹೊಸದಾಗಿ ಕಟ್ಟಲಾದ ಚಲನಚಿತ್ರ ಮಂದಿರಗಳಿಗೆ ಮೊದಲ ಪ್ರದರ್ಶನದಿಂದ 3 ವರ್ಷದವರೆಗೆ ಮನರಂಜನಾ ತೆರಿಗೆ ವಿನಾಯಿತಿ ಮಾಡಲಾಗಿದೆ. ವಿನಾಯಿತಿ ಪಡೆದ ಚಿತ್ರಮಂದಿರಗಳು ವರ್ಷದಲ್ಲಿ ಕನಿಷ್ಠ ಶೇ.75 ರಷ್ಟು ಕನ್ನಡ, ಕೊಡವ, ಕೊಂಕಣಿ, ತುಳು ಮತ್ತು ಬಂಜಾರಾ ಭಾಷೆಯ ಚಲನಚಿತ್ರಗಳನ್ನು ಪ್ರದರ್ಶಿಸಬೇಕೆಂದು ನಿಬಂಧನೆ ಹಾಕಲಾಗಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೂ ಇದೇ ನಿಯಮ ಅನ್ವಯಿಸಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.