ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ಹಾಗೂ ಜೂನಿಯರ್ ರೆಬೆಲ್ ಸ್ಟಾರ್ ಅಭಿನಯದ ಸಿನಿಮಾ ಸ್ಪೇಷಲ್ ಡೇ ಒಂದೇ ದಿನವಾಗಿದೆ. ದಾಸನ ಸಿನಿಮಾ ’ಯಜಮಾನ’ ಹಾಗೂ ’ಅಮರ್’ ಟ್ರೈಲರ್ ಒಂದೇ ದಿನ ರಿಲೀಸಾಗಲಿದೆ. ಎರಡೂ ಒಟ್ಟಿಗೆ ರಿಲೀಸ್ ಆಗುವುದರಿಂದ ಕ್ಲಾಷ್ ಆಗುವುದು ಸಹಜ. ಎರಡೂ ಕೂಡಾ ಬಹುನಿರೀಕ್ಷಿತ ಚಿತ್ರಗಳು. ಈ ಚಿತ್ರದ ಟೀಸರ್ ಗಳು ಯೂಟ್ಯೂಬ್ ನಲ್ಲಿ ಈಗಾಗಲೇ ಧೂಳೆಬ್ಬಿಸಿದೆ. ಸಿನಿಮಾ ಕೂಡಾ ಧೂಳೆಬ್ಬಿಸುವುದರಲ್ಲಿ ಅನುಮಾನವಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಮಾರ್ಚ್ 1 ರಂದು ಯಜಮಾನ ಹಾಗೂ ಅಮರ್ ಒಟ್ಟಾಗಿ ಬರುತ್ತದೆ?

ಜಾಲೆಂಜಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಯಜಮಾನ' ಮಾರ್ಚ್ 1 ರಂದು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ನಿರ್ಧಾರ ಮಾಡಿದೆ. ಈಗಾಗಲೆ 'ಯಜಮಾನ' ಚಿತ್ರದ ಹಾಡು ಹಾಗೂ ಟ್ರೇಲರ್ ಸಿಕ್ಕಾಪಟ್ಟೆ ಹಿಟ್ ಆಗಿ ಮಿಸ್ ಮಾಡದೆ ನೋಡಲೇಬೇಕಾದ ಸೌತ್ ಇಂಡಿಯನ್ ಸಿನಿಮಾದಲ್ಲಿ ಯಜಮಾನ ಸೇರಿಕೊಂಡಿದೆ.

ಇನ್ನು ಜೂನಿಯರ್ ರೆಬೆಲ್ ಸ್ಟಾರ್ ಅಭಿ‍ಷೇಕ್ ಅಂಬರೀಶ್ ಸಿನಿ ರಂಗಕ್ಕೆ ’ಅಮರ್’ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದು ಸಿನಿಮಾದ ಟೀಸರ್ ರಿಲೀಸ್ ಆದ ದಿನವೇ ಲಕ್ಷಗಟ್ಟಲೇ ವೀಕ್ಷಣೆ ಪಡೆದು ಹೊಸದೊಂದು ನಿರೀಕ್ಷೆ ಮೂಡಿಸಿದೆ. ಈ ಸಹೋದರರ ಮೋಡಿಯಿಂದ ಬೇರೆ ಚಿತ್ರರಂಗಗಳು ಸ್ಯಾಂಡಲ್‌ವುಡ್ ನತ್ತ ಮುಖ ಮಾಡುವುದಂತೂ ಗ್ಯಾರಂಟಿ.