ಖ್ಯಾತ ಕನ್ನಡ ನಿರ್ಮಾಪಕಿ ಜಯಶ್ರೀ ದೇವಿ ನಿಧನ | ನಮ್ಮೂರ ಮಂದಾರ ಹೂವೆ, ಹಬ್ಬ, ಶ್ರೀ ಮಂಜುನಾಥ, ಅಮೃತವರ್ಷಿಣಿ, ಸ್ನೇಹಲೋಕ, ಪ್ರೇಮರಾಗ ಸೇರಿದಂತೆ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದವರು.

ಬೆಂಗಳೂರು (ಫೆ. 13): ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಜಯಶ್ರೀ ದೇವಿ ಇಂದು ಬೆಳಿಗ್ಗೆ ಹೃದಯಾಘಾತದಿಮದ ನಿಧನರಾಗಿದ್ದಾರೆ. ಜಯಶ್ರೀ ದೇವಿಯವರಿಗೆ 60 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ಹೈದಾರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲತಃ ಪತ್ರಕರ್ತೆಯಾಗಿದ್ದ ಜಯಶ್ರೀ ದೇವಿ ಕೋಣ ಈದೈತೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ನಮ್ಮೂರ ಮಂದಾರ ಹೂವೆ, ಹಬ್ಬ, ಶ್ರೀ ಮಂಜುನಾಥ, ಅಮೃತವರ್ಷಿಣಿ, ಸ್ನೇಹಲೋಕ, ಪ್ರೇಮರಾಗ ಸೇರಿದಂತೆ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದವರು. 

ಇತ್ತೀಚಿಗೆ ತೆರೆ ಕಂಡ ಸುದೀಪ್-ಉಪೇಂದ್ರ ಅಭಿನಯದ ಮುಕುಂದ ಮುರಾರಿ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದರು. ಯಲಹಂಕದಲ್ಲಿರುವ ಜಯಶ್ರಿಯವರ ನಿವಾಸದಲ್ಲಿ ನಾಳೆ ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಜಯಶ್ರೀಯವರ ಪುತ್ರ ವಾಸು ಹೇಳಿದ್ದಾರೆ.

ಜಯಶ್ರೀಯವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಖ್ಯಾತ ಪತ್ರಕರ್ತ ಜೋಗಿಯವರು ಸಂತಾಪ ಸೂಚಿಸಿದ್ದು ಹೀಗೆ.