ಕುಸ್ತಿ ಪೈಲ್ವಾನ್‌, ಬಾಕ್ಸಿಂಗ್‌ ಸ್ಟೇಜ್‌ ಹತ್ತಿದರೂ ಅದೇ ಪವರ್‌, ಅದೇ ಖಡಕ್‌ ಲುಕ್‌ನಲ್ಲಿ ಅರ್ಭಟಿಸಲಿದ್ದಾರೆಂದು ಹೇಳುವಂತಿದೆ ಈ ಪೋಸ್ಟರ್‌. ಬೇರೆ ಬೇರೆ ಭಾಷೆಯ ಸ್ಟಾರ್‌ಗಳು ಚಿತ್ರದ ಬಗ್ಗೆ ಮಾತನಾಡಿದ್ದರಿಂದ ಆಯಾ ಭಾಷೆಗಳಲ್ಲಿ ಚಿತ್ರದ ಮೇಲೆ ಸಾಕಷ್ಟುಕ್ರೇಜ್‌ ಹುಟ್ಟಿಕೊಂಡಿದೆ. ಒಟ್ಟು ಐದು ಭಾಷೆಗಳಲ್ಲಿ ತೆರೆ ಕಾಣುವುದಕ್ಕೆ ಸಿದ್ದವಾಗಿರುವ ಈ ಚಿತ್ರಕ್ಕೆ ಅಂತಿಮ ಹಂತದ ಎಡಿಟಿಂಗ್‌ ನಡೆಯುತ್ತಿದೆ. ಒಟ್ಟು 120 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಚಿತ್ರದ ಹೆಸರು ಪೈಲ್ವಾನ್‌. ಆದರೆ, ಸುದೀಪ್‌ ಅವರು ಬಾಕ್ಸಿಂಗ್‌ ಲುಕ್‌ನಲ್ಲಿ ಹೇಗಿರುತ್ತಾರೆ ಎಂಬುದು ಅವರ ಅಭಿಮಾನಿಗಳಲ್ಲಿ ಇದ್ದ ದೊಡ್ಡ ಕುತೂಹಲ. ಈಗ ಚಿತ್ರೀಕರಣ ಮುಗಿಸಿದ್ದು, ಬಾಕ್ಸಿಂಗ್‌ ಲುಕ್‌ನ ಪೋಸ್ಟರ್‌ ಬಿಡುಗಡೆ ಮಾಡಿದ್ದೇವೆ - ಕೃಷ್ಣ, ನಿರ್ದೇಶಕ

ಆಡಿಯೋ ಜತೆಗೆ ವಿತರಕರ ಪರಿಚಯ

ಸದ್ಯದಲ್ಲೇ ಚಿತ್ರಕ್ಕೆ ಎಡಿಟಿಂಗ್‌ ಮುಗಿಯಲಿದ್ದು, ಎಲ್ಲಾ ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಈವೆಂಟ್‌ ಮಾಡಿ ಆಡಿಯೋ ಬಿಡುಗಡೆ ಮಾಡುವ ಪ್ಲಾನ್‌ ನಿರ್ದೇಶಕ ಕೃಷ್ಣ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರದ್ದು. ಆ ನಿಟ್ಟಿನಲ್ಲಿ ಈಗಾಗಲೇ ಒಂದಿಷ್ಟುತಯಾರಿಗಳು ನಡೆದಿವೆ. ಆಡಿಯೋ ಬಿಡುಗಡೆ ಜತೆಗೆ ಯಾವ ಯಾವ ಭಾಷೆಯಲ್ಲಿ ಯಾರಾರ‍ಯರೂ ‘ಪೈಲ್ವಾನ್‌’ ಚಿತ್ರವನ್ನು ವಿತರಣೆ ಮಾಡಲಿದ್ದಾರೆ ಎಂಬುದನ್ನು ಹೇಳುವ ಕಾರ್ಯಕ್ರಮವೂ ನಡೆಯಲಿದೆ. ಅಂದುಕೊಂಡಂತೆ ಆದರೆ, ಏಕಕಾಲಕ್ಕೆ ಐದು ಭಾಷೆಯಲ್ಲಿ ಒಟ್ಟಿಗೆ ಆಡಿಯೋ ಅನಾವರಣಗೊಳ್ಳಲಿದೆ.

ರಿಲೀಸ್‌ಗೂ ಮುನ್ನ ಕೋಟಿ ಕೋಟಿ ಕಲೆಕ್ಷನ್ ಮಾಡ್ತಾ ಪೈಲ್ವಾನ್?

ಒಟ್ಟಿನಲ್ಲಿ ಪೈಲ್ವಾನ್‌ನ ಬಾಕ್ಸಿಂಗ್‌ ಪೋಸ್ಟರ್‌, ಕಿಚ್ಚನ ಅಭಿಮಾನಿಗಳಲ್ಲಿ ಮಾತ್ರವಲ್ಲ, ಚಿತ್ರರಂಗದಲ್ಲೂ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ. ಸದ್ಯ ಸುದೀಪ್‌ ಅವರು ‘ಕೋಟಿಗೊಬ್ಬ 3’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.