Asianet Suvarna News Asianet Suvarna News

ಹಿಂದಿ ಮತ್ತು ಕನ್ನಡದಲ್ಲಿ ‘ನಿಷ್ಕರ್ಷ’ ರೀ-ರಿಲೀಸ್!

1993ರಲ್ಲಿ ತೆರೆಕಂಡು ದಾಖಲೆ ಸ್ಥಾಪಿಸಿದ, ಸುನಿಲ್‌ಕುಮಾರ್‌ ದೇಸಾಯಿ ನಿರ್ದೇಶನದ ನಿಷ್ಕರ್ಷ ಇಪ್ಪತ್ತೈದು ವರ್ಷಗಳ ನಂತರ ಮತ್ತೊಮ್ಮೆ ತೆರೆಕಾಣುತ್ತಿದೆ.

kannada movie Nishkarsha to rerelease in Sandalwood and bollywood
Author
Bangalore, First Published Aug 29, 2019, 9:09 AM IST

ವಿಷ್ಣುವರ್ಧನ್‌ ಅಭಿನಯದ ಈ ಚಿತ್ರವನ್ನು ಅವರ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್‌ 20ರಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಬಿಸಿ ಪಾಟೀಲ್‌ ನಿರ್ಧರಿಸಿದ್ದಾರೆ.

‘ನಾನು ಪೊಲೀಸ್‌ ಅಧಿಕಾರಿ ಆಗಿದ್ದಾಗ ನಿರ್ಮಿಸಿದ ಸಿನಿಮಾ ಇದು. ಪೊಲೀಸರಿಗೆ ಗೌರವ ತರುವಂಥ ಒಂದು ಕತೆ ಬೇಕು ಅಂದಾಗ ಸುನಿಲ್‌ ಕುಮಾರ್‌ ದೇಸಾಯಿ ಈ ಸಿನಿಮಾದ ಕತೆ ಹೇಳಿದರು. ನನಗೆ ಇಷ್ಟವಾಯಿತು. ವಿಷ್ಣುವರ್ಧನ್‌, ಅನಂತನಾಗ್‌ ಮುಖ್ಯಪಾತ್ರಗಳಲ್ಲಿ ನಟಿಸಿದರೆ, ನಾನು ಖಳನಾಯಕನಾಗಿ ನಟಿಸಿದೆ.

ರಾಜಕಾರಣದಲ್ಲೊಬ್ಬ ಕ್ರೇಜಿ ರಾಜಕಾರಣಿ; ‘ನಿಷ್ಕರ್ಷ’ ರೀ ರಿಲೀಸ್ ಗೆ ಬಿಗ್ ಪ್ಲ್ಯಾನ್!

ಬ್ಯಾಂಕ್‌ ದರೋಡೆಯ ಕತೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಹಾಡು ಇರಲಿಲ್ಲ, ನಾಯಕಿಯೂ ಇಲ್ಲ. ಹೀಗಾಗಿ ಇದನ್ನು ಯಾರೂ ನೋಡುವುದಿಲ್ಲ ಎಂಬ ಟೀಕೆ ಬಂತು. ಆದರೆ ಈ ಸಿನಿಮಾ ತ್ರಿವೇಣಿ ಮತ್ತು ಸಂತೋಷ್‌ ಚಿತ್ರಮಂದಿಗಳಲ್ಲಿ 106 ದಿನ ಓಡಿ ದಾಖಲೆ ಮಾಡಿತು. ಇದಕ್ಕೆ ಮೂರು ರಾಜ್ಯಪ್ರಶಸ್ತಿಗಳೂ ಬಂದವು. ಉದಯ ಫಿಲ್ಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಏಳು ಪ್ರಶಸ್ತಿ ಬಂತು. ಜನ ಇದನ್ನು ಕೊಂಡಾಡಿದರು.

ಈ ಸಿನಿಮಾ 25 ವರ್ಷಗಳ ನಂತರ ಬರಬೇಕಿತ್ತು ಅಂತ ಆಗ ಕೆಲವರು ಗೇಲಿ ಮಾಡಿದ್ದರು. ಇದೀಗ 25 ವರ್ಷಗಳ ನಂತರವೂ ತನ್ನ ರೋಚಕತೆ ಕಳೆದುಕೊಳ್ಳದ ಈ ಸಿನಿಮಾ ಈಗ ಮತ್ತೊಮ್ಮೆ ತೆರೆ ಕಾಣುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಡಿಟಿಎಸ್‌ ಸೌಂಡ್‌ನೊಂದಿಗೆ ಹಿಂದಿ ಮತ್ತು ಕನ್ನಡದಲ್ಲಿ ಇದನ್ನು ತೆರೆಗೆ ತರುತ್ತಿದ್ದೇನೆ. ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತೇನೆ. ಇದು ವಿಷ್ಣು ಹುಟ್ಟುಹಬ್ಬಕ್ಕೆ ನನ್ನ ಕೊಡುಗೆ’ ಎಂದು ಬಿಸಿ ಪಾಟೀಲ್‌ ತಮ್ಮ ಮನಸ್ಸಿನ ಮಾತು ಹೇಳಿಕೊಂಡಿದ್ದಾರೆ.

Follow Us:
Download App:
  • android
  • ios