ಇದೀಗ ಚಿತ್ರತಂಡ ಸೇರಿಕೊಂಡ ರಕ್ಷಾ ಸೋಮಶೇಖರ್ ನಾಯಕಿ ಎನ್ನುವುದು ನಿಜವಾದರೂ ಅವರಿಲ್ಲಿ ಜೋಡಿ ಆಗುತ್ತಿರುವುದು ಕಥಾ ನಾಯಕ ಸತೀಶ್ ಅವರಿಗಲ್ಲ. ವಶಿಷ್ಠ ಸಿಂಹ ಅವರಿಗೆ

ಸತೀಶ್ ನೀನಾಸಂ ಅಭಿನಯದ ‘ಗೋದ್ರಾ’ ಚಿತ್ರಕ್ಕೀಗ ಬೆಂಗಳೂರು ಚೆಲುವೆ ರಕ್ಷಾ ಸೋಮಶೇಖರ್ ಎಂಟ್ರಿ ಆಗಿದ್ದಾರೆ. ಹಾಗಂತ, ಈ ಚಿತ್ರಕ್ಕೆ ಮೊದಲೇ ನಾಯಕಿ ಆಗಿದ್ದ ಶ್ರದ್ಧಾ ಶ್ರೀನಾಥ್ ಕತೆ ಏನಾಯ್ತು ಅಂತ ಕೇಳಬೇಡಿ. ಅವರೂ ಇದ್ದಾರೆ. ಅವರೇ ಈ ಚಿತ್ರದ ನಾಯಕಿ. ಇದೀಗ ಚಿತ್ರತಂಡ ಸೇರಿಕೊಂಡ ರಕ್ಷಾ ಸೋಮಶೇಖರ್ ನಾಯಕಿ ಎನ್ನುವುದು ನಿಜವಾದರೂ ಅವರಿಲ್ಲಿ ಜೋಡಿ ಆಗುತ್ತಿರುವುದು ಕಥಾ ನಾಯಕ ಸತೀಶ್ ಅವರಿಗಲ್ಲ. ವಶಿಷ್ಠ ಸಿಂಹ ಅವರಿಗೆ. ಕೆ.ಎಸ್. ನಂದೀಶ್ ನಿರ್ದೇಶನದ ಚೊಚ್ಛಲ ಚಿತ್ರ ‘ಗೋದ್ರಾ’ಕ್ಕೆ ಬಂಡವಾಳ ಹಾಕಿದವರು ನಿರ್ದೇಶಕ ಜೇಕಬ್ ವರ್ಗೀಸ್. ಜತೆಗೆ ಫಿಲ್ಮ್ ಸಿಟಿ ಗಣೇಶ್ ಕೂಡ ಸಾಥ್ ನೀಡಿದ್ದಾರೆ. ಈಗಾಗಲೇ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ, ಕುಕ್ಕೆ ಮತ್ತು ಸುಬ್ರಹ್ಮಣ್ಯ ಸುತ್ತಲ ಅರಣ್ಯ ಪ್ರದೇಶದಲ್ಲಿ ಮೊದಲ ಹಂತದ ಚಿತ್ರೀಕರಣ ಆಗಿದೆ. ಅಂದಹಾಗೆ ಚಿತ್ರದ ಟೈಟಲ್‌ಗೂ ಗೋದ್ರಾ ಗಲಭೆಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ನಿರ್ದೇಶಕ ನಂದೀಶ್.

‘ಇದೊಂದು ಪ್ರೇಮ ಕಥಾ ಚಿತ್ರ. ದಕ್ಷಿಣ ಕನ್ನಡ ಜಿಲ್ಲೆ ಸುಬ್ರಮಣ್ಯದಿಂದ ಹೊರಟು ಉತ್ತರ ಭಾರತದ ಕಡೆಗೂ ಸಾಗುವ ಕತೆಯದು. ಹಾಗಾಗಿಯೇ ಚಿತ್ರೀಕರಣ ಸುಬ್ರಹ್ಮಣ್ಯ, ಕುಕ್ಕೆ ಜತೆಗೆ ಮಂಗಳೂರು, ಕಾಸರಗೋಡು ಸುತ್ತಮುತ್ತಲ ಸುಂದರ ತಾಣಗಳ ಮೂಲಕ ಜಾರ್ಖಂಡ್‌ನಲ್ಲೂ ನಡೆಯಲಿದೆ’ ಎನ್ನುತ್ತಾರೆ.