ಕೊಲೆ, ಚೇಸಿಂಗ್‌, ಸಸ್ಪೆನ್ಸ್‌ ಜತೆಗೆ ಒಂದು ಸೆಂಟಿಮೆಂಟ್‌. ಇವುಗಳ ಪೈಕಿ ಗೆಲ್ಲುವುದು ಯಾವುದು ಎನ್ನುವುದೇ ಈ ಚಿತ್ರದ ಕ್ಲೈಮ್ಯಾಕ್ಸ್‌. ನಿರೂಪಣೆ ಹಾಗೂ ತಾಂತ್ರಿಕವಾಗಿ ಕನ್ನಡದ ಮಟ್ಟಿಗೆ ಹೊಸದು ಎನಿಸುವ, ಆಗಾಗ ಹಾಲಿವುಡ್‌ ಚಿತ್ರಗಳ ನೆರಳನ್ನು ನೆನಪಿಸುವ ಮಟ್ಟಿಗೆ ನಿರ್ದೇಶಕರು ಈ ಚಿತ್ರವನ್ನು ರೂಪಿಸಿದ್ದಾರೆ ಎಂಬುದು ವಿಶೇಷ. ಪೊಲೀಸು, ಕ್ರೈಮು, ಅಂಡರ್‌ ಕವರ್‌ ಅಪರೇಷನ್‌ನಂತಹ ಜಾನರ್‌ ಚಿತ್ರಗಳಲ್ಲಿ ಮಹಿಳಾ ಪಾತ್ರಗಳಿಗೆ ಮಹತ್ವ ಸಿಗುವುದು ಕಡಿಮೆ ಎನ್ನುವ ಅರೋಪಕ್ಕೆ ತದ್ವಿರುದ್ದವಾಗಿ ಈ ಚಿತ್ರದಲ್ಲಿ ಅಂಡರ್‌ ಕವರ್‌ ಮಹಿಳಾ ಏಜೆಂಟ್‌ ಪಾತ್ರವೇ ಈ ಚಿತ್ರದ ಹೀರೋ!

ಹೌಸ್‌ಫುಲ್ ಪ್ರದರ್ಶನ ಕಂಡ ರಾಜ್‌ ಬಿ ಶೆಟ್ಟಿ ಸಿನಿಮಾ!

ವಿರಾಮದ ವರೆಗೂ ರೋಡ್‌ ಮೂವಿಯಂತೆ ಸಾಗಿ, ಆ ನಂತರ ಒಂದೊಂದೇ ತಿರುವಿನಲ್ಲಿ ಕತೆ ತೆರೆದುಕೊಳ್ಳುವ ಮೂಲಕ, ಪ್ರೇಕ್ಷಕರಲ್ಲಿ ನೋಡುವ ಆಸಕ್ತಿ ಹೆಚ್ಚಿಸುತ್ತದೆ. ನಿರ್ದೇಶಕ ಮಹೇಶ್‌ ಗೌಡ ಅವರು ಕಡಿಮೆ ಪಾತ್ರಗಳು, ಸೀಮಿತ ಲೋಕೇಶನ್‌ಗಳಲ್ಲೇ ಕತೆಯನ್ನು ಹೇಳುವ ಸಾಹಸ ಮಾಡುತ್ತಾರೆ. ಅವರ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಲ್ಲುವುದು ಕೀರ್ತನ್‌ ಪೂಜಾ ಅವರ ಕ್ಯಾಮೆರಾ ಕಣ್ಣು,ಮಿಥುನ್‌ ಮುಕುಂದನ್‌ ಅವರ ಹಿನ್ನೆಲೆ ಸಂಗೀತ. ಗಂಡ- ಹೆಂಡತಿ ಅಂಡರ್‌ ಕವರ್‌ ಟೀಮ್‌ನಲ್ಲಿರುವ ಅಧಿಕಾರಿಗಳು. ಇವರ ತಂಡದ ಅತ್ಯಂತ ಪ್ರಾಮಾಣಿಕ ಮತ್ತು ಧೈರ್ಯ ಶಾಲಿ ಅಧಿಕಾರಿ ಮಾಯ ಅಲಿಯಾಸ್‌ ದೇವಕಿ, ತಮ್ಮ ಪತಿಯ ಕಿಶೋರ್‌ ಜತೆಗೂಡಿ ಕ್ರಿಮಿನಲ್‌ ಅಡ್ಡೆ ಮೇಲೆ ದಾಳಿ ಮಾಡುತ್ತಾರೆ. ಇಲ್ಲಿ ಮೋಸ್ಟ್‌ ವಾಟೆಂಟ್‌ ಕ್ರಿಮಿನಲ್‌ ಅಡಗಿದ್ದಾನೆ. ಹೀಗೆ ದಾಳಿ ಮಾಡಿ ಇನ್ನೇನು ಆ ಕ್ರಿಮಿನಲ್‌ನನ್ನು ಸಾಯಿಸಬೇಕು ಅಷ್ಟರಲ್ಲಿ, ಅತನನ್ನು ಸೆರೆಹಿಡಿಯುವಂತೆ ಅದೇಶ ಬರುತ್ತದೆ.

ಲಂಡನ್‌ನಿಂದ ಬಂದು ಕನ್ನಡ ಸಿನಿಮಾ ನಿರ್ಮಾಣ ಮಾಡಿದ ಟೆಕ್ಕಿ!

ಮುಂದೆ ಮಾಫಿಯಾ ಜತೆ ಹೇಗೆ ಕೈ ಜೋಡಿಸುತ್ತಾರೆ ಎಂಬಿತ್ಯಾದಿ ವಿವರಣೆಗಳನ್ನು ತೆರೆ ಮೇಲೆ ನೋಡಬಹುದು. ದೇವಕಿ ಪಾತ್ರದಲ್ಲಿ ವರ್ಜಿನಿಯಾ, ಮಗಳ ಪಾತ್ರದಲ್ಲಿ ಚೈತ್ರಾ ಆಚಾರ್‌, ತನಿಖಾದಳದ ಅಧಿಕಾರಿ ಪಾತ್ರದಲ್ಲಿ ಬಾಲಾಜಿ ಮನೋಹರ್‌, ಮಾಯಾ ಪಾತ್ರವನ್ನು ಬೆನ್ನತ್ತುವ ಪಾತ್ರದಲ್ಲಿ ರಾಜ್‌ ಬಿ ಶೆಟ್ಟಿಅವರ ಪಾತ್ರಗಳು ಕತೆಗೆ ಪೂರಕವಾಗಿ ಮೂಡಿವೆ. ಅದರಲ್ಲೂ ವರ್ಜಿನಿಯಾ ಅವರು ರಿಯಲ್‌ ಸ್ಟೆಂಟ್‌ಗಳು ಹಾಲಿವುಡ್‌ ಚಿತ್ರಗಳನ್ನು ನೆನಪಿಸುತ್ತವೆ. ಆ ಮಟ್ಟಿಗೆ ಅವರು ಪೂರ್ವ ತಯಾರಿ ಮಾಡಿಕೊಂಡಂತೆ ನಟಿಸಿದ್ದಾರೆ. ಚೈತ್ರಾ ಆಚಾರ್‌, ಕನ್ನಡಕ್ಕೆ ಈ ಚಿತ್ರದ ಮೂಲಕ ಸಿಕ್ಕಿರುವ ಭರವಸೆಯ ಪ್ರತಿಭೆ.