‘ಕೆಂಪೇಗೌಡ 2’ ಚಿತ್ರದಲ್ಲಿ ಅತಿಥಿ ನಟರ ದಂಡು!
ಲೂಸ್‌ಮಾದ, ಕ್ರಿಕೆಟರ್ ಶ್ರೀಶಾಂತ್, ಹಾಸ್ಯನಟ ಆಲಿ, ಚಿರಂಜೀವಿ ಸೋದರ ನಾಗಬಾಬು, ತಮಿಳಿನ ಮಧುಸೂದನ ರಾವ್, ಮುನ್ನಾಬಾಯ್ ಎಂಬಿಬಿಎಸ್ ಚಿತ್ರದ ಯತಿನ್ ಕಾರ್ಯೇಕರ್
ಕೋಮಲ್ ನಟನೆಯ ‘ಕೆಂಪೇಗೌಡ 2’ ಚಿತ್ರದಲ್ಲಿ ಅತಿಥಿ ಪಾತ್ರಗಳದ್ದೇ ದೊಡ್ಡ ಹವಾ. ವಿಶೇಷ ಅಂದರೆ ಮೂರು ಭಾಷೆಗಳನ್ನು ನೆನಪಿಸುವ ಗೆಸ್ಟ್ ರೋಲ್‌ಗಳು ಈ ಚಿತ್ರದಲ್ಲಿವೆ. ಕನ್ನಡದಿಂದ ಲೂಸ್‌ಮಾದ ಯೋಗೀಶ್, ಕ್ರಿಕೆಟಿಗ ಶ್ರೀಶಾಂತ್, ತೆಲುಗಿನಿಂದ ಹಾಸ್ಯ ನಟ ಆಲಿ, ಮೆಗಸ್ಟಾರ್ ಚಿರಂಜೀವಿ ಸೋದರ ನಾಗಬಾಬು, ತಮಿಳಿನಿಂದ ಮಧುಸೂಧನ್ ರಾವ್ ಜತೆಗೆ ಬಾಲಿವುಡ್‌ನಲ್ಲಿ ‘ಮುನ್ನಬಾಯ್ ಎಂಬಿಬಿಎಸ್’ ಚಿತ್ರದಲ್ಲಿ ಆನಂದ್ ಬ್ಯಾನರ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಯತಿನ್ ಕಾರ್ಯೇಕರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ.
ಕೆಂಪೇಗೌಡ 2 ಚಿತ್ರದಿಂದ ಕೋಮಲ್‌ಗೆ ಜೀವ ಬೆದರಿಕೆ ?
ಹಿಂದಿ ಹಾಗೂ ಗುಜರಾತಿ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಮರಾಠಿ ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವ ಯತಿನ್ ಕಾರ್ಯೇಕರ್ ಅವರದ್ದು ದೊಡ್ಡ ಹೆಸರು. ‘ಮುನ್ನಾಬಾಯ್ ಎಂಬಿಬಿಎಸ್’ ಚಿತ್ರದಲ್ಲಿ ಇವರ ಪಾತ್ರ ಮರೆಯಲಾಗದು. ‘ಅತಿಥಿ ಪಾತ್ರಗಳು ಕತೆಗೆ ಪೂರಕವಾಗಿ ಬರುತ್ತವೆ. ಮಾರುಕಟ್ಟೆದೃಷ್ಟಿಯಿಂದ ಇವರನ್ನು ಹಾಕಿಕೊಂಡಿಲ್ಲ. ಆದರೆ, ಅತಿಥಿ ಪಾತ್ರಗಳು ಹಾಗೂ ಚಿತ್ರದ ಪೋಷಕ ಪಾತ್ರಗಳ ಸಂಯೋಜನೆ ವಿಶೇಷವಾಗಿರಬೇಕು ಎನ್ನುವ ಕಾರಣಕ್ಕೆ ಎಲ್ಲ ಭಾಷಿಕರನ್ನು ಕರೆತಂದಿದ್ದೇನೆ. ಪೋಷಕ ಪಾತ್ರಗಳಲ್ಲಿ ದತ್ತಣ್ಣ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್ ಮುಂತಾದವರು ಇದ್ದಾರೆ’ ಎನ್ನುತ್ತಾರೆ ಕೋಮಲ್.
‘ಮಣ್ಣಲ್ಲಿ ಹೂತಿಟ್ಟ ಸತ್ಯ ಹೊರ ತೆಗಿತೀನಿ’ ಎಂದ ಕಾಮಿಡಿ ಕಿಂಗ್!
ಅಂದಹಾಗೆ ಚಿತ್ರದ ಕತೆ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ, ಕರ್ನಾಟಕ ಮೂಲದ ಹೈ ಪ್ರೋಫೈಲ್ ವ್ಯಕ್ತಿಯ ಸಾವಿನ ಸುತ್ತ ಈ ಸಿನಿಮಾ ಸಾಗುತ್ತದೆ. ಸಿನಿಮಾ ನೋಡುವಾಗ ಆ ವ್ಯಕ್ತಿ ಯಾರು, ಯಾರ ಸಾವು, ಹೇಗೆ ಆಯ್ತು ಎಂಬುದನ್ನು ಪ್ರೇಕ್ಷಕರು ನೇರವಾಗಿ ಕನೆಕ್ಟ್ ಮಾಡಿಕೊಳ್ಳುತ್ತಾರೆಂಬ ನಂಬಿಕೆ ಚಿತ್ರದ ನಾಯಕ ಕೋಮಲ್ ಅವರದ್ದು. ಇದೇ ಆಗಸ್ಟ್ 9ಕ್ಕೆ ಈ ಸಿನಿಮಾ ತೆರೆಗೆ ಬರುತ್ತಿದೆ.