ಚಿತ್ರವೊಂದು ಯಶಸ್ವೀ ಪ್ರದರ್ಶನ ಕಾಣುತ್ತಾ ಭರ್ಜರಿ ಕಲೆಕ್ಷನ್ನಿನೊಂದಿಗೆ ದಾಪುಗಾಲಿಟ್ಟರೆ ಕನ್ನಡ ಚಿತ್ರರಂಗ ಶುಕ್ರದೆಸೆ ಆರಂಭವಾದ ಖುಷಿಯಲ್ಲಿ ನಳನಳಿಸುತ್ತದೆ. ಆದರೆ ಅಂಥಾ ಪುಷ್ಕಳ ಗೆಲುವು ದಕ್ಕೋದೇ ಅಪರೂಪಕ್ಕೊಮ್ಮೆ.

ಅಂಥಾ ಅಪರೂಪದ ಗೆಲುವೊಂದನ್ನು ತನ್ನದಾಗಿಸಿಕೊಂಡು ಈ ವರ್ಷದ ಹಿಟ್ ಚಿತ್ರವಾಗಿ ಆರ್. ಚಂದ್ರು ನಿರ್ದೇಶನದ ಐ ಲವ್ ಯೂ ದಾಖಲಾಗಿದೆ. ಆರ್. ಚಂದ್ರು ನಿರೀಕ್ಷೆಯಂತೆಯೇ ಅಂಥಾದ್ದೊಂದು ಕಮಾಲ್ ಸೃಷ್ಟಿಸಿದ್ದಾರೆ. ಈ ಚಿತ್ರವನ್ನು ಮೊದಲ ದಿನ ನೋಡಿದ ಬಹುತೇಕರು ಹಂಡ್ರೆಡ್ ಡೇಸ್ ಗ್ಯಾರೆಂಟಿ ಎಂಬಂಥಾ ಭವಿಷ್ಯ ನುಡಿದಿದ್ದರು.

ಐ ಲವ್ ಯೂ ಚಿತ್ರದ ಕಲೆಕ್ಷನ್ ಮುಟ್ಟಿತು 22 ಕೋಟಿ

ಮೊದಲ ದಿನವೇ ಕೇಳಿ ಬಂದ ಈ ಮಾತುಗಳೀಗ ನಿಜವಾಗೋ ಲಕ್ಷಣಗಳೇ ದಟ್ಟವಾಗಿವೆ. ಯಾಕೆಂದರೆ ಐ ಲವ್ ಯೂ ಚಿತ್ರ ನೋಡಿದ ಪ್ರತಿಯೊಬ್ಬರ ಮಾತುಗಳಲ್ಲಿಯೂ ಹಂಡ್ರೆಡ್ ಡೇಸ್ ಗ್ಯಾರೆಂಟಿ ಎಂಬ ಮಾತುಗಳೇ ಮಾರ್ಧನಿಸುತ್ತಿವೆ.

ಹೀಗೆ ಐ ಲವ್ ಯೂ ನೋಡಿದ ಪ್ರೇಕ್ಷಕರ ಸಕಾರಾತ್ಮಕವಾದ ಮಾತುಗಳೇ ಬಾಯಿಂದ ಬಾಯಿಗೆ ಹರಡಿಕೊಂಡು ಇಡೀ ಕರ್ನಾಟಕದ ತುಂಬೆಲ್ಲ ಈ ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇತ್ತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಚಿತ್ರಗಳು ವಾರವೊಂದನ್ನು ಯಶಸ್ವಿಯಾಗಿ ದಾಟಿಕೊಂಡು ಥೇಟರಿನಲ್ಲಿ ಉಳಿಯೋದೇ ದೊಡ್ಡ ಪವಾಡ. ಆದರೆ ಐ ಲವ್ ಯೂ ಅದನ್ನು ಲೀಲಾಜಾಲವಾಗಿಯೇ ದಾಟಿಕೊಂಡಿದೆ.

ಐ ಲವ್ ಯು ‘ಹಾಟ್’ ರಹಸ್ಯ ಬಿಚ್ಚಿಟ್ಟ ಉಪೇಂದ್ರ

ಗಮನಿಸಲೇ ಬೇಕಾದ ಅಂಶವೆಂದರೆ, ಯಾವ ಗಿಮಿಕ್ಕುಗಳು ಕೂಡಾ ಕಂಟೆಂಟು ಚೆನ್ನಾಗಿಲ್ಲದೇ ಇದ್ದರೆ ಚಿತ್ರವೊಂದನ್ನು ಹೀಗೆ ಥೇಟರಿನಲ್ಲಿ ಉಳಿಸಲು ಸಾಧ್ಯವೇ ಇಲ್ಲ. ಐ ಲವ್ ಯೂ ವಾರಗಳಾಚೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ ತನ್ ನ ಗಟ್ಟಿ ಕಥೆಯೊಂದಿಗೇ ಪ್ರೇಕ್ಷಕರನ್ನು ಮೋಡಿಗೀಡು ಮಾಡಿದೆ. ಈ ಯಶದ ಯಾತ್ರೆ ಶತಕ ಸಂಭ್ರಮವಾಗಿ ಬದಲಾಗೋದರಲ್ಲಿ ಯಾವ ಸಂಶಯವೂ ಇಲ್ಲ.