Asianet Suvarna News Asianet Suvarna News

ಕೆಂಪೇಗೌಡ ಕೋಮಲ್‌ಗೆ ಹತ್ತು ಲಕ್ಷ!

ಕೋಮಲ್‌ ಅಭಿನಯದ ‘ಕೆಂಪೇಗೌಡ-2’ ಚಿತ್ರದ ಟ್ರೇಲರ್‌ ಅನ್ನು ಯೂಟ್ಯೂಬ್‌ನಲ್ಲಿ ಹತ್ತು ಲಕ್ಷ ವೀಕ್ಷಕರು ನೋಡಿದ್ದಾರೆ

Kannada Kempegowda 2 official trailer crosses 10 lakhs views
Author
Bangalore, First Published May 17, 2019, 10:45 AM IST
  • Facebook
  • Twitter
  • Whatsapp

ಚಿತ್ರ ಕಾರಣಾಂತರಗಳಿಂದ ತಡವಾದರೂ ಚಿತ್ರದ ಬಗೆಗಿನ ಕ್ರೇಜ್‌ ಕಡಿಮೆ ಆಗಿಲ್ಲ ಎಂಬುದನ್ನು ಟ್ರೇಲರ್‌ ಹೇಳುತ್ತದೆ. ನಟ ಜಗ್ಗೇಶ್‌ ಅವರು ಈ ಸಂತಸವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಕೆಂಪೇಗೌಡ 2 ಚಿತ್ರಕ್ಕೆ ಟ್ರೇಲರ್‌ ಅನ್ನು ಒಂದು ಮಿಲಿಯನ್‌ ನೋಡಿದ್ದಾರೆಂದು ಕೇಳಿ ಖುಷಿ ಆಯಿತು. ಕನ್ನಡಿಗರಿಗೆ ಧನ್ಯವಾದಗಳು. ನಾನು ಆಗಾಗಲೇ ಸಿನಿಮಾ ನೋಡಿದ್ದೇನೆ. ನೋಡುವಾಗ ರೋಮಾಂಚನವಾಯಿತು. ಒಂದು ಯಶಸ್ವಿ ದೊಡ್ಡ ಕಮರ್ಷಿಯಲ್‌ ಸಿನಿಮಾಗಳ ಸಾಲಿಗೆ ಈ ಚಿತ್ರ ಸೇರುತ್ತದೆ. ಪ್ರೇಕ್ಷಕರಿಗೂ ಅದೇ ರೀತಿ ಇಷ್ಟವಾಗುತ್ತದೆಂಬ ನಂಬಿಕೆ ಇದೆ’ ಎಂದಿದ್ದಾರೆ ಜಗ್ಗೇಶ್‌.

‘ಮಣ್ಣಲ್ಲಿ ಹೂತಿಟ್ಟ ಸತ್ಯ ಹೊರ ತೆಗಿತೀನಿ’ ಎಂದ ಕಾಮಿಡಿ ಕಿಂಗ್!

ಒಂದು ಮಿಲಿಯನ್‌ ಹಿಟ್ಸ್‌ ಬಂದಿದೆ ಎನ್ನುವುದು ಖುಷಿಯ ವಿಚಾರ. ತುಂಬಾ ಜನ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಕೋರುತ್ತಿದ್ದಾರೆ. ಟ್ರೇಲರ್‌ ನೋಡಿದವರು ಸಿನಿಮಾ ನೋಡಕ್ಕೆ ಬರುತ್ತಾರೆ. ಯಾಕೆಂದರೆ ಅವರಲ್ಲಿ ಕುತೂಹಲ ಮೂಡಿಸಿದೆ. ಇಷ್ಟೇ ಸಂಖ್ಯೆಯಲ್ಲಿ ಸಿನಿಮಾ ನೋಡಿದರೆ ಖಂಡಿತ ನಮ್ಮ ಚಿತ್ರ ಸೂಪರ್‌ ಹಿಟ್‌ ಆಗುತ್ತದೆ.- ಕೋಮಲ್‌, ನಟ

ಈ ಚಿತ್ರದಲ್ಲಿ ಲೂಸ್‌ಮಾದ ಯೋಗೀಶ್‌ ನಟಿಸಿದ್ದಾರೆ. ಅವರ ಪಾತ್ರ ಹೇಗಿರುತ್ತದೆ ಎಂಬುದನ್ನು ಇಲ್ಲಿಯವರೆಗೂ ಗುಟ್ಟಾಗಿಯೇ ಇಡಲಾಗಿದೆ. ಕ್ರಿಕೆಟಿಗ ಶ್ರೀಶಾಂತ್‌ ಖಳನಾಯಕನಾಗಿ ನಟಿಸಿರುವುದು ಚಿತ್ರದ ಮತ್ತೊಂದು ಹೈಲೈಟ್‌. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವ ಶಂಕರೇಗೌಡ ಹಾಗೂ ಶ್ರೀಶಾಂತ್‌ ಇಬ್ಬರು ಆತ್ಮೀಯ ಸ್ನೇಹಿತರು. ಹೀಗಾಗಿಯೇ ಅವರು ಚಿತ್ರದಲ್ಲಿ ವಿಲನ್‌ ಪಾತ್ರ ಮಾಡಿದ್ದಾರೆ.

Follow Us:
Download App:
  • android
  • ios