ಬೆಂಗಳೂರು (ಆ. 22): ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಯಕ್ತಿಕ ಬದುಕು ಆಗಾಗ ಚರ್ಚೆಗೊಳಗಾಗುತ್ತಿರುತ್ತದೆ. ವರಮಹಾಲಕ್ಷ್ಮೀ ಹಬ್ಬದ ದಿನ ಪತ್ನಿ ವಿಜಯಲಕ್ಷ್ಮಿಗೆ ಹೊಡೆದಿದ್ದಾರೆ ಎನ್ನಲಾಗಿದ್ದು ಅದೀಗ ದೊಡ್ಡ ಸುದ್ದಿಯಾಗಿದೆ. 

ಸ್ಯಾಂಡಲ್‌ವುಡ್ ನಟನೊಂದಿಗೆ ಹೆಸರು ಥಳಕು ಹಾಕಿಕೊಂಡಿರುವ ಪವಿತ್ರಾ ಗೌಡ ಯಾರು?

ದರ್ಶನ್ ಸಾರ್ವಜನಿಕ ಜೀವನದಲ್ಲಿ ಬಹಳ ಒಳ್ಳೆಯ ಹೆಸರಿರುವ ವ್ಯಕ್ತಿ. ಕೊಡುಗೈ ದಾನಿ ಎಂದೇ ಹೆಸರಾದವರು.  ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ನಟ, ಬಾಕ್ಸಾಫೀಸ್ ಸುಲ್ತಾನ್ ಎಂದೇ ಹೆಸರಾದವರು. ಆದರೆ ವೈಯಕ್ತಿಕ ಬದುಕು ಅಂತ ಬಂದಾಗ ಮಾತ್ರ ಇವರ ಬಗ್ಗೆ ಅಪಸ್ವರಗಳು ಕೇಳಿ ಬರುತ್ತವೆ. 

ಹೆಸರು ತೆಗೆದು ಇದ್ದಕ್ಕಿದ್ದಂತೆ ಪತಿ ದರ್ಶನ್ ಅನ್ ಫಾಲೋ ಮಾಡಿದ ವಿಜಯಲಕ್ಷ್ಮೀ

ದರ್ಶನ್ ನಡವಳಿಕೆ ಬಗ್ಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ್ದಾರೆ. ದರ್ಶನ್ ಗೆ ಬುದ್ಧಿವಾದ ಹೇಳಿದ್ದಾರೆ. ರವಿ ಬೆಳಗೆರೆ ಮಾತುಗಳನ್ನು ಅವರದೇ ಮ್ಯಾನರಿಸಂನಲ್ಲಿ ಕೇಳಿದರೆ ಚಂದ. ಇಲ್ಲಿದೆ ಕೇಳಿಸಿಕೊಳ್ಳಿ.