ಅಧಿಕೃತವಾಗಿ ರಿಲೀಸ್‌ ಆದ ದಿನವೇ ಇದನ್ನು ಒಂದು ಲಕ್ಷ ಜನ ವೀಕ್ಷಿಸಿದ್ದರು. ಇದೀಗ ಆ ಸಂಖ್ಯೆ 6 ಲಕ್ಷಕ್ಕೆ ತಲುಪಿದೆ. ಇದು ಚಿತ್ರತಂಡಕ್ಕೂ ಖುಷಿ ಕೊಟ್ಟಿದೆ. ಚಿತ್ರದ ಬಗೆಗೆ ಒಂದು ಕುತೂಹಲ ಮೂಡಿಸುವಲ್ಲಿ ಟೀಸರ್‌ ಸಕ್ಸಸ್‌ ಆಗಿದೆ ಎನ್ನುವ ವಿಶ್ವಾಸದ ಮೇಲೆಯೇ ಚಿತ್ರತಂಡ ಈಗ ಟ್ರೇಲರ್‌ ಲಾಂಚ್‌ಗೆ ಸಿದ್ಧತೆ ನಡೆಸಿದೆ. ‘ಗುಲ್ಟು’ ಚಿತ್ರದ ಯಶಸ್ಸಿನ ನಂತರ ಅದರ ನಿರ್ಮಾಪಕರಾದ ಪ್ರಶಾಂತ್‌ ರೆಡ್ಡಿ ಹಾಗೂ ದೇವರಾಜ್‌ ರಾಮಣ್ಣ ನಿರ್ಮಿಸಿದ ಚಿತ್ರವಿದು. ‘ಗುಲ್ಟು’ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ ಕೂಡ ನಿರ್ಮಾಪಕರಾಗಿ ಅವರಿಗೆ ಇಲ್ಲಿ ಸಾಥ್‌ ನೀಡಿದ್ದಾರೆ. ಅನೂಪ್‌ ರಾಮಸ್ವಾಮಿ ಆ್ಯಕ್ಷನ್‌ ಕಟ್‌ ಹೇಳಿದ್ದು, ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

 

‘ಎರಡು ಹಾಡು ಚಿತ್ರೀಕರಿಸುವುದು ಬಾಕಿಯಿದೆ. ಒಂದು ಹಾಡಿಗೆ ಸೆಟ್‌ ರೆಡಿ ಆಗುತ್ತಿದೆ. ಮತ್ತೊಂದು ಹಾಡಿಗೆ ಮಳೆಗಾಗಿ ಕಾಯುತ್ತಿದ್ದೇವೆ. ಇನ್ನು ಫೈಟ್‌ ಸೀನ್‌ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದೆ. ಇದಿಷ್ಟುಮುಗಿದರೆ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಕಾಲಿಡಲಿದೆ’ ಎನ್ನುತ್ತಾರೆ ನಿರ್ದೇಶಕ ಅನೂಪ್‌ ರಾಮಸ್ವಾಮಿ.