ಹೌದು, ಇವರ ರಚನೆಯಲ್ಲಿ ಮೂಡಿ ಬಂದಿರುವ ‘ಹೇಳಿ ಹೋಗು ಕಾರಣ’ ಎನ್ನುವ ಗೀತೆಯನ್ನು ಈ ಕಾಲಕ್ಕೆ ತಕ್ಕಂತೆ ‘ಪಡ್ಡೆಹುಲಿ’ ಚಿತ್ರದಲ್ಲಿ ಮರು ಚಿತ್ರೀಕರಣ ಮಾಡಲಾಗಿದೆ.ಇದೇ ಹಾಡನ್ನು ಮೊದಲು ಮೈಸೂರು ಅನಂತಸ್ವಾಮಿ ಸಂಗೀತ ಮತ್ತು ಕಂಠದಲ್ಲಿ ಬಂತು. ನಂತರ ಸಿ ಅಶ್ವತ್ಥ್ ಅವರ ಧ್ವನಿಯಲ್ಲೂ ಈ ಹಾಡು ಮೂಡಿ ಬಂತು. ಆ ಕಾಲ ಕಾಲಕ್ಕೆ ತಕ್ಕಂತೆ ಗುಣುಗುತ್ತಿರುವ ಈ ಹಾಡನ್ನು ರ‌್ಯಾಪ್ ಶೈಲಿನಯಲ್ಲಿ ನಿರ್ದೇಶಕ ಗುರು ದೇಶಪಾಂಡೆ ಅವರು ತಮ್ಮ ‘ಪಡ್ಡೆಹುಲಿ’ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.

ರಾಕ್‌ಬ್ಯಾಂಡ್‌ನೊಂದಿಗೆ ಮೂಡಿ ಬಂದಿರುವ ಈ ಹಾಡನ್ನು ಹೊಸ ರೀತಿಯಲ್ಲಿ ಸಿದ್ದಾರ್ಥ್ ಮಾಧವನ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.  ಶ್ರೇಯಸ್-ನಿಶ್ವಿಕಾ ನಾಯ್ಡು ಅಭಿನಯದ ‘ಪಡ್ಡೆಹುಲಿ ಚಿತ್ರಕ್ಕೆ ಹಾಡುಗಳೇ ಮುಖ್ಯ ಪಿಲ್ಲರ್‌ಗಳು. ಕನ್ನಡತನವನ್ನು ಹಾಡುಗಳ ಮೂಲಕ ಸಾರುವ ನಾಯಕನ ಪಾತ್ರಕ್ಕೆ ತಕ್ಕಂತೆ ಕನ್ನಡದ ಹಳೆಯ ಭಾವ ಗೀತೆಯನ್ನು ಇಲ್ಲಿ ಬಳಸಿಕೊಂಡಿದ್ದೇವೆ. ಕನ್ನಡದ ಭಾವಗೀತೆಗಳು ಹಾಗೂ ಜಾನಪದ ಹಾಡುಗಳು ಆಯಾ ಕಾಲಕ್ಕೆ ಮತ್ತೆ ಮತ್ತೆ ಹೊಸದಾಗಿ ಕೇಳಿಸುತ್ತಿರಬೇಕು. ಆ ನಿಟ್ಟಿನಲ್ಲಿ ಬಿ ಆರ್ ಲಕ್ಷ್ಮಣ್ ರಾವ್ ಅವರು ಬರೆದಿರುವ ಹೇಳಿ ಹೋಗು ಕಾರಣ ಗೀತೆಯನ್ನು ನಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಇದು ಕತೆ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಮೂಡಿ ಬರಲಿದೆ. ಪಿಆರ್‌ಕೆ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಬಿಡುಗಡೆ ಮಾಡಿದ್ದೇವೆ. ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ’ ಎಂಬುದು ನಿರ್ದೇಶಕ ಗುರು ದೇಶಪಾಂಡೆ ಅವರ ಮಾತು.

ಪಡ್ಡೆಹುಲಿ ಚಿತ್ರದಲ್ಲಿ ಸಾಹಸಸಿಂಹನಿಗೆ ಸಲಾಂ!