‘ಈಗಲೇ ಗಳಿಕೆ ಲೆಕ್ಕ ಕೊಡಬಹುದು. ಕೆಲವು ಕಾರಣಗಳಿಗೆ ವ್ಯವಹಾರದ ಮಾತುಗಳು ಬೇಡ. ಸದ್ಯದಲ್ಲೇ ತಿಳಿಸುತ್ತೇವೆ’ ಎಂದು ನಿರ್ದೇಶಕರ ಉತ್ತರಕ್ಕೆ ಮತ್ತೊಂದಿಷ್ಟುವಿವರಣೆ ಸೇರಿದ್ದು ಧೀರಾಜ್‌ ಫಿಲಮ್ಸ್‌ನ ವಿತರಕರು.

ಸ್ಯಾಂಡಲ್‌ವುಡ್ ನಟ ರಿಷಿ Engaged!

ಆದರೆ, ಇವರೆಲ್ಲರ ಮಾತುಗಳನ್ನು ಕೇಳುತ್ತ ಕೂತಿದ್ದ ಅನಂತ್‌ನಾಗ್‌ ಸಿನಿಮಾ ಗಳಿಕೆ ಲೆಕ್ಕ ಹೇಳುವುದಕ್ಕೆ ಮುಂದಾದರು. ‘ನಿಜ ಹೇಳಬೇಕು ಅಂದರೆ ಈ ಸಿನಿಮಾದಿಂದ ಒಳ್ಳೆಯ ಗಳಿಕೆ ಆಗಿದೆ. ಇಲ್ಲಿವರೆಗೂ ನಮ್ಮ ಕವಲುದಾರಿ ಸಿನಿಮಾ 6 ಕೋಟಿ ಗಳಿಕೆ ಮಾಡಿದೆ. ಹೀಗಾಗಿ ನಿರ್ಮಾಪಕರಿಗೆ ಹಾಕಿರುವ ಬಂಡವಾಳ ಜತೆಗೆ ಲಾಭವೂ ಬಂದಿದೆ’ ಎನ್ನುವ ಮೂಲಕ ಚಿತ್ರದ ಕಲೆಕ,್ನ ಗುಟ್ಟು ಬಿಟ್ಟುಕೊಟ್ಟರು. ಜತೆಗೆ ಅವರು ಚಿತ್ರದ ಬಗ್ಗೆ ಬಂದ ರಿವ್ಯೂಗಳು, ಜನರು ನೀಡುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ಕೊಂಚ ಭಾವುಕರಾದರು. ‘ತುಂಬಾ ಕಷ್ಟಪಟ್ಟು ಎಲ್ಲರು ಪ್ರೀತಿಯಿಂದ ಮಾಡಿದ ಸಿನಿಮಾ. ಹಲವು ವರ್ಷಗಳಿಂದ ಚಿತ್ರರಂದಲ್ಲಿದ್ದೇನೆ. ನಮ್ಮ ಈ ಚಿತ್ರಕ್ಕೆ ಬಂದ ವಿಮರ್ಶೆಗಳನ್ನು ನೋಡಿ ನನಗೇ ಅಚ್ಚರಿ ಆಯ್ತು. ಜತೆಗೆ ನಮ್ಮ ಜವಾಬ್ದಾರಿಯೂ ಹೆಚ್ಚಿಸಿದೆ ಅನಿಸಿತು. ಖಂಡಿತ ಇದೊಂದು ಒಳ್ಳೆಯ ಸಿನಿಮಾ ಆಗುತ್ತದೆ ಎಂದು ಮೊದಲ ಪ್ರತಿ ನೋಡಿದಾಗಲೇ ನಿರೀಕ್ಷೆ ಮಾಡಲಾಗಿತ್ತು. ನಾವು ಅಂದುಕೊಂಡಂತೆ ಆಗಿದೆ’ ಎಂದು ಅನಂತ್‌ನಾಗ್‌ ಹೇಳಿಕೊಂಡರು.

ಪಿಆರ್‌ಕೆ ಪ್ರೊಡಕ್ಷನ್‌ನ ಮೊದಲ ನಿರ್ಮಾಣದ ಚಿತ್ರ. ಮೊದಲ ಹೆಜ್ಜೆಯಲ್ಲೇ ಗೆಲುವು ಕಂಡ ಸಂಭ್ರಮ ಅವರದ್ದು. 6 ಕೋಟಿ ಗಳಿಕೆಯ ಖುಷಿಯಲ್ಲಿರುವ ‘ಕವಲುದಾರಿ’ ಸದ್ಯ 120 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ ಸಿನಿಮಾ ಬ್ಯಾನರ್‌ ಮೂಲಕ ಹೊರ ದೇಶಗಳಲ್ಲೂ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಅಂದಹಾಗೆ ಈ ಚಿತ್ರವನ್ನು ಮೂರು ಭಾಷೆಗಳಿಗೆ ರೀಮೇಕ್‌ ಮಾಡಲು ಮಾತುಕತೆ ನಡೆಯುತ್ತಿದೆ. ಈಗಾಗಲೇ ತೆಲುಗು, ತಮಿಳು, ಹಿಂದಿ ನಿರ್ಮಾಪಕರ ಜತೆ ಮಾತುಕತೆ ಮಾಡುತ್ತಿದ್ದು, ಸದ್ಯದಲ್ಲೇ ಎಲ್ಲವೂ ಅಂತಿಮಗೊಳ್ಳಲಿದ್ದು, ಕನ್ನಡದ ‘ಕವಲುದಾರಿ’ ಪರಭಾಷೆಗಳಿಗೆ ಪ್ರವೇಶ ಮಾಡಲಿದೆ ಎನ್ನುವ ಸಂತಸದ ಸಮಾಚಾರ ಹೇಳಿಕೊಂಡರು ನಿರ್ದೇಶಕ ಹೇಮಂತ್‌ ರಾವ್‌.

ಅನಂತನಾಗ್‌ ಮುತ್ತಣ್ಣ ಆಗಿದ್ದು ಹೇಗೆ ಗೊತ್ತಾ?