ಶರ್ಮಿಳಾ ಸದ್ಯಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಹೊಸ ವರ್ಷದಲ್ಲಿ ಕನ್ನಡದ ಚಿತ್ರ ರಸಿಕರಿಗೆ ತಮ್ಮಿಂದ ದೊಡ್ಡ ಸುದ್ದಿಯೊಂದು ಕಾದಿದೆ ಎಂದಿದ್ದಾರೆ.

ಚಂದನವನದ ಮತ್ತೊಬ್ಬ ನಟಿ ನಿರ್ಮಾಪಕಿ ಆಗುವ ತವಕದಲ್ಲಿದ್ದಾರೆ. ಶ್ರುತಿ ಹರಿಹರನ್ ಹಾಗೂ ರಚಿತಾ ರಾಮ್ ಈಗಾಗಲೇ ಒಂದೊಂದು ಕಿರುಚಿತ್ರಗಳನ್ನು ತಮ್ಮದೇ ಸಂಸ್ಥೆಗಳ ಮೂಲಕ ನಿರ್ಮಿಸಿದ್ದಾರೆ. ಈಗ ಆ ಸಾಲಿಗೆ ಹೊಸದಾಗಿ ಸೇರ್ಪಡೆ ಶರ್ಮಿಳಾ ಮಾಂಡ್ರೆ. ಶರ್ಮಿಳಾ ಸದ್ಯಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಹೊಸ ವರ್ಷದಲ್ಲಿ ಕನ್ನಡದ ಚಿತ್ರ ರಸಿಕರಿಗೆ ತಮ್ಮಿಂದ ದೊಡ್ಡ ಸುದ್ದಿಯೊಂದು ಕಾದಿದೆ ಎಂದಿದ್ದಾರೆ. ಆ ಸುದ್ದಿ ಯಾವುದು ಅಂತ ಬೆನ್ನತ್ತಿ ಹೋದಾಗ ಗೊತ್ತಾಗಿದ್ದು ಅವರದೇ ಚಿತ್ರ ನಿರ್ಮಾಣ ಸಂಸ್ಥೆಯ ಆರಂಭ. ಅವರಿಗೆ ಚಿತ್ರ ನಿರ್ಮಾಣ ಹೊಸದಲ್ಲ. ಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ದಯಾನಂದ್ ಮಾಂಡ್ರೆ ಸುದ್ದಿ ಮಾಡಿದವರು. ಅದೇ ಕುಟುಂಬದ ಶರ್ಮಿಳಾ ಈಗ ನಿರ್ಮಾಪಕಿಯಾಗುತ್ತಿದ್ದಾರೆ.

ಚಿತ್ರರಂಗಕ್ಕೆ ಹೊಸದಾಗಿ ಬರುವ ನಟ-ನಟಿಯರಿಗೆ, ಹೊಸ ಬಗೆಯ ಕತೆಗಳಿಗೆ ಒಂದು ವೇದಿಕೆ ಕಲ್ಪಿಸಿಕೊಡುವ ಮಹಾದಾಸೆ ಹೊಂದಿದೆ. ಅದೇ ಶರ್ಮಿಳಾ ಹೋಮ್ ಬ್ಯಾನರ್‌ನ ವಿಶೇಷ ಎನ್ನುತ್ತಿವೆ ಮೂಲಗಳು. ಜೊತೆ ಥ್ರಿಲ್ಲರ್ ಚಿತ್ರವೊಂದರಲ್ಲೂ ಕಾಣಿಸಿಕೊಳ್ಳಲಿದ್ದಾರೆ.