ನಟಿ ಸಂಯುಕ್ತ ಹೆಗ್ಡೆ ಕಾಲೇಜ್ ಕುಮಾರ ಸಿನಿಮಾ ಬಿಡುಗಡೆಯಾದ ನಂತರವೂ ಪ್ರಮೋಷನ್'ನಲ್ಲೂ ಭಾಗವಹಿಸದೆ ಚಿತ್ರತಂಡಕ್ಕೆ ಕಿರಿಕ್ ನೀಡಿದ್ದಳು.(Video courtesy: Colours Kannada)
ಬಿಗ್ ಬಾಸ್ ಆವೃತ್ತಿ 5ರಲ್ಲಿ ಮತ್ತೊಂದು ಅವಾಂತರ ನಡೆದಿದೆ. ಈಗಾಗಲೇ 3 ತ್ತು 4ರ ಆವೃತ್ತಿಯಲ್ಲಿ ಹುಚ್ಚ ವೆಂಕಟ್ ರವಿ ಮರೂರು ಹಾಗೂ ಪ್ರಥಮ್ ಮೇಲೆ ಹಲ್ಲೆಯಾಗಿತ್ತು. ಈಗ ವೈಲ್ಡ್ ಕಾರ್ಡ್'ನಲ್ಲಿ ಎಂಟ್ರಿ ಪಡೆದು ಬಿಗ್ ಬಾಸ್ ಮನೆಗೆ ಪ್ರವೇಶಿಸಿರುವ ನಟಿ ಸಂಯುಕ್ತ ಹೆಗಡೆ ಸ್ಪರ್ಧಿ ಸಮೀರ್ ಆಚಾರ್ಯ'ಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಅನುಚಿತವಾಗಿ ವರ್ತಿಸಿದ ಕಾರಣ ಹಲ್ಲೆ ನಡೆದಿದೆ ಎನ್ನಲಾಗಿದೆ.
