ವೈಲ್ಡ್ ಕಾರ್ಡ್'ನಲ್ಲಿ ಎಂಟ್ರಿ ಪಡೆದಿದ್ದ ನಟಿ ಸಂಯುಕ್ತ ಹೆಗಡೆ ಕಳೆದ ವಾರ ಬೆಗ್'ಬಾಸ್ ಮನೆಯಲ್ಲಿ ಗೇಮ್ ನಡೆಯುವ ವೇಳೆ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿದ್ದರು
ಕನ್ನಡ ಬಿಗ್'ಬಾಸ್'ನ 5ನೇ ಆವೃತ್ತಿ ಈ ಬಾರಿ ತನ್ನದೆ ರೀತಿಯಲ್ಲಿ ವೀಕ್ಷಕರಿಂದ ಹೆಚ್ಚು ಮನರಂಜನೆ ಪಡೆದುಕೊಳ್ಳುತ್ತಿದೆ. ಈಗಾಗಲೇ 10 ವಾರಗಳು ಶೋ ನಡೆದಿದ್ದು, ಹಲ್ಲೆ ಮಾಡಿದ ಸಂಯುಕ್ತ ಹೆಗೆಡೆ ಸೇರಿದಂತೆ 10 ಮಂದಿ ಮನೆಯಿಂದ ಹೊರ ಹೋಗಿದ್ದಾರೆ.
ವೈಲ್ಡ್ ಕಾರ್ಡ್'ನಲ್ಲಿ ಎಂಟ್ರಿ ಪಡೆದಿದ್ದ ನಟಿ ಸಂಯುಕ್ತ ಹೆಗಡೆ ಕಳೆದ ವಾರ ಬೆಗ್'ಬಾಸ್ ಮನೆಯಲ್ಲಿ ಗೇಮ್ ನಡೆಯುವ ವೇಳೆ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿದ್ದರು. ನಿಯಮ ಉಲ್ಲಂಘಿಸಿದ ಕಾರಣ ಮನೆಯಿಂದ ಹೊರ ಕಳುಹಿಸಲಾಗಿತ್ತು.
ನಾಳೆ ಶನಿವಾರ 11ನೇ ವಾರದದ ಎಲಿಮೆನೇಟೆಡ್ ಕಾರ್ಯಕ್ರಮದಲ್ಲಿ ಗೆಲ್ಲುವ ಸ್ಪರ್ಧಿಯಲ್ಲಿ ಒಬ್ಬರಾದ ಹಾಗೂ ಸಂಯುಕ್ತ ಹೆಗಡೆಯಿಂದ ಹಲ್ಲೆಗೊಳಗಾದ ಸಮೀರ್ ಆಚಾರ್ಯ ಎಲಿಮೆನೇಟ್ ಆಗಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಸತ್ಯಾಸತ್ಯತೆಯ ಬಗ್ಗೆ 2 ದಿನದ ನಂತರ ನಿಜಾಂಶ ಹೊರಬೀಳಲಿದೆ.
