‘ಎಲ್ಲರಿಗೂ ನಮಸ್ಕಾರ. ನನಗೆ ಕನ್ನಡ ಮಾತಾಡಲು, ಬರೆಯಲು, ಓದಲು ತುಂಬಾ ಚೆನ್ನಾಗಿ ಬರುತ್ತದೆ. ಕನ್ನಡ ಬರವಣಿಗೆಯಲ್ಲಿ ನಾನು ಎಕ್ಸ್‌ಟ್ರಾ ಅಂಕ ಗಳಿಸುತ್ತಿದ್ದೆ. ಕನ್ನಡ ಭಾಷೆಯ ಮೇಲೆ ನನಗೆ ತುಂಬು ಹೃದಯದ ಗೌರವವಿದೆ.’

ಹೀಗೆ ಮುತ್ತು ಪೋಣಿಸಿದಂತೆ ಮುದ್ದಾದ ಅಕ್ಷರಗಳಲ್ಲಿ ಪತ್ರ ಬರೆದವರು ‘ನೀರ್‌ದೋಸೆ’ ಹುಡುಗಿ ಹರಿಪ್ರಿಯಾ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ಇದ್ದಕ್ಕಿದ್ದ ಹಾಗೆ ಹರಿಪ್ರಿಯಾಗೆ ತನ್ನ ಕನ್ನಡತನವನ್ನು ತೋರಿಸಬೇಕು ಅಂತ ಅನಿಸಿದ್ಯಾಕೆ ಅಂದರೆ ಅದಕ್ಕೂ ಪತ್ರದಲ್ಲಿ ಉತ್ತರವಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಅವರು ಇಂಗ್ಲೀಷ್ ಭಾಷೆ ಬಳಸೋದಕ್ಕೆ ಹಲವು ಅಭಿಮಾನಿಗಳು ತಕರಾರು ಎತ್ತಿದ್ದಾರಂತೆ. ಇನ್ ಬಾಕ್ಸ್‌ಗೆ ಬಂದು ನೀವು ಕನ್ನಡ ಬಳಸಲೇ ಬೇಕು ಅಂತ ಒತ್ತಡ ಹೇರಿದ್ದಾರಂತೆ. ಆದರೆ ತನಗೆ ಬೇರೆ ಭಾಷೆಗಳಲ್ಲೂ ಅಭಿಮಾನಿಗಳಿದ್ದಾರೆ. ಕನ್ನಡದಲ್ಲಿ ಬರೆದರೆ ಅವರಿಗೆ ಅರ್ಥ ಆಗಲ್ಲ ಎಂಬುದು ಹರಿಪ್ರಿಯಾ ನುಡಿ. ಕನ್ನಡ ಜನರ ಉದಾರ ಹೃದಯವಂತಿಕೆಯನ್ನೂ ಹರಿಪ್ರಿಯಾ ಪತ್ರದಲ್ಲಿ ಹಾಡಿ ಹೊಗಳಿದ್ದಾರೆ.

Scroll to load tweet…

"