ಕೆಲವರು ತುಂಬಾನೇ ಓದಿರ್ತಾರೆ ಅನ್ಕೋಂಡಿರ್ತಾರೆ, ಮತ್ತೂ ಹಲವರು ವಿದ್ಯಾಭ್ಯಾಸ ಮಾಡಿರಲ್ಲ ಅಂಥ ತಿಳ್ಕೊಂಡಿರ್ತಾರೆ. ನಟಿಮಣಿಯರ ಡಿಟೇಲ್ಸ್ ಇಲ್ಲಿದೆ.
ಕನ್ನಡದ ಸ್ಟಾರ್ ನಟಿಯರು ಮತ್ತವರ ವಿದ್ಯಾಭ್ಯಾಸ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೆ ಇರುತ್ತದೆ. ಕೆಲವರು ತುಂಬಾನೇ ಓದಿರ್ತಾರೆ ಅನ್ಕೋಂಡಿರ್ತಾರೆ, ಮತ್ತೂ ಹಲವರು ವಿದ್ಯಾಭ್ಯಾಸ ಮಾಡಿರಲ್ಲ ಅಂಥ ತಿಳ್ಕೊಂಡಿರ್ತಾರೆ. ನಟಿಮಣಿಯರ ಡಿಟೇಲ್ಸ್ ಇಲ್ಲಿದೆ.
ಸಣ್ಣ ವಯಸ್ಸಿನಿಂತ ಸಿನಿಮಾ ಜಗತ್ತಿಗೆ ಕಾಲಿಟ್ಟವರು ಅಮೂಲ್ಯ. ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿದ್ದಾರೆ. ಉನ್ನತ ವ್ಯಾಸಂಗ ಮಾಡೊ ಆಸೆನೂ ಇದೆ ಆದರೆ ಸಿನಿಮಾಗಳಲ್ಲಿ ಬಿಜಿಯಾದ್ಮೆಲೆ ಓದಿನ ಕಡೆ ಸಮಯಾನೆ ಸಿಗ್ತಿಲ್ಲ.
ಬೆಂಗಳೂರಿನಲ್ಲಿ ಪಂಚ ಭಾಷಾತಾರೆ ಪ್ರಿಯಾಮಣಿ ಓದಿರೋದು ಬ್ಯಾಚುಲರ್ ಆಫ್ ಸೈಕಾಲಜಿ. ಚಿತ್ರರಂಗದಲ್ಲಿ ಬಿಜಿಯಾದ್ಮೇಲೆ ಹೆಚ್ಚಿನ ವಿದ್ಯಾಭ್ಯಾಸದ ಕಡೆ ತಲೆ ಹಾಕಲಿಲ್ಲ.
ಮನಸಾರೆ ಬೆಡಗಿ ಐಂದ್ರಿತಾ ರೇ ಇನ್ ಡೆಂಟಲ್ ಸೈನ್ಸ್'ನಲ್ಲಿ ಪದವಿ ಮುಗ್ಸಿದ್ದಾರೆ. ತಂದೆ ಡೆಂಟಲ್ ಡಾಕ್ಟರ್ ಆದ ಕಾರಣ ಮಗಳೂ ಅದನ್ನೆ ಓದಿದ್ದಾರೆ. ಬಿ.ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲಿ ಡಿಗ್ರಿ ಮುಗಿಸೋ ಟೈಮಲ್ಲೇ ಜಾಹಿರಾತು,ಸಿನಿಮಾ ಅಂಥ ಬಿಜಿಯಾದವರು ಮತ್ತೆ ಓದಿನ ಕಡೆ ಗಮನ ಹರಿಸಲಿಲ್ಲ.
ನೀರ್ ದೋಸೆ ಹುಡುಗಿ ಹರಿಪ್ರಿಯ ಮುಗಿಸಿರೋದು ಜಸ್ಟ್ ಪಿಯೂಸಿ. ತಂದೆಯ ಅಗಲಿಕೆಯಿಂದ ಮನೆಯ ಜವಾಬ್ದಾರಿ ಹೊತ್ತಿದ್ದರಿಂದ ವಿದ್ಯೆಗೆ ನೈವೇದ್ಯ ಹೇಳಿ ಅಭಿನಯವನ್ನೇ ವೃತ್ತಿಯಾಗಿಸಿಕೊಂಡ್ರು.
ನಟ ಯಶ್'ನ ಭಾವಿ ಮಡದಿ ರಾಧಿಕಾ ಪಂಡಿತ್ ಮೂಲತಃ ಬೆಂಗಳೂರಿನ ಹುಡುಗಿ. ಓದಿರೋದು ಬಿಕಾಂ. ವಿದ್ಯೆ, ಅಭಿನಯ ಎರಡೂ ಈಕೆಗೆ ಒಲಿದಿದೆ. ಮುಂದಿನ ತಿಂಗಳು ಇನ್ನೇನಿದ್ರೂ ಅನ್ಕೊಂಡ ಹುಡುಗನ ಕೈಹಿಡಿಯೋದಷ್ಟೆ ಬಾಕಿ.
ಕೃತಿ ಖರಬಂಧ ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜಿನಲ್ಲಿ ಜಿವೆಲ್ಸ್ ಡಿಸೈನಿಂಗ್'ನಲ್ಲಿ ಪದವಿ ಮುಗಿಸಿದ್ದಾರೆ. ಒಟ್ಟಿನಲ್ಲಿ ಕನ್ನಡದ ಬಹುತೇಕ ನಟಿ ಮಣಿಯರು ಪದವಿಯನ್ನು ಪೂರೈಸಿರುವುದಂತೂ ಸುಳ್ಳಲ್ಲ.
ವರದಿ: ಸುಗುಣ, ಸುವರ್ಣ ನ್ಯೂಸ್
