ಆಶಿಕಾ ರಂಗನಾಥ್:

ಪ್ರೀತಿಯ ಆಚರಣೆಗೆ ಇಂಥದ್ದೇ ಒಂದು ದಿನ ಬೇಕು ಅನ್ನೋದರಲ್ಲಿ ನನಗೆ ನಂಬಿಕ್ಕೆ ಇಲ್ಲ. ಪ್ರೀತಿಸುವ ಪ್ರತಿ ದಿನವೂ ಸಂಭ್ರಮ ಇರಬೇಕು, ಸಂತಸ ಇರಬೇಕು ಅನ್ನೋದು ನನ್ನ ಸಿದ್ಧಾಂತ. ಹಾಗಂತ ಅದು ಓರ್ವ ಹುಡುಗ-ಹುಡುಗಿ ನಡುವಿನ ಪ್ರೀತಿಯಷ್ಟೇ ಅಲ್ಲ. ಮಕ್ಕಳ ಮೇಲೆ ಅಪ್ಪ-ಅಮ್ಮ ಅವರಿಗಿರುವ ಪ್ರೀತಿ, ಅಣ್ಣ- ತಮ್ಮ ಹಾಗೂ ತಂಗಿಯರ ನಡುವಿನ ಪ್ರೀತಿ, ಗಂಡ-ಹೆಂಡತಿ ನಡುವಿನ ಪ್ರೀತಿಯೂ ಸೇರಿ ಪ್ರತಿ ಮನಸ್ಸುಗಳ ನಡುವಿನ ಪ್ರೀತಿ ನಿರಂತರವಾಗಿ ಸಂಭ್ರಮದಲ್ಲಿರಬೇಕು ಎನ್ನುವುದು ನನ್ನ ನಂಬಿಕೆ. ಪ್ರೀತಿಸಿದವರು, ಪ್ರೀತಿಸಿ ಮದುವೆ ಆದವರು ನಮ್ಮ ಫ್ರೆಂಡ್ಸ್ ಸರ್ಕಲ್ ಜತೆಗೆ ಫ್ಯಾಮಿಲಿ ಕಡೆಯಲ್ಲೂ ಸಾಕಷ್ಟು ಜನ ಇದ್ದಾರೆ. ಅವರೆಲ್ಲ ಚೆನ್ನಾಗಿಯೇ ಇದ್ದಾರೆ. ಸಂಭ್ರಮ, ಸಂತಸದಲ್ಲಿ ಇರುವುದನ್ನು ನೋಡಿದಾಗೆಲ್ಲ ನನಗೂ ಅಂತಹದೊಂದು ಪ್ರೀತಿ ಸಿಗಬೇಕು ಅಂತೆನಿಸುತ್ತೆ. ಆದರೆ, ಆ ತರಹದ ಹುಡುಗ ನನಗಿನ್ನು ಸಿಕ್ಕಿಲ್ಲ. ಅದೇನೆ ಇದ್ದರೂ, ಪ್ರೀತಿಸುವ ಪ್ರತಿ ಮನಸ್ಸುಗಳಿಗೆ ವ್ಯಾಲೆಂಟೆನ್ಸ್ ನೆಪದಲ್ಲಿ ನನ್ನ ಶುಭ ಕೋರಿಕೆ.