ಡಾ. ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ಹೆಚ್ಚು ಅಭಿನಯಸಿದ ವೇನುಗೋಪಾರ್  ಡಕೋಟ ಎಕ್ಸ್ಪ್ರೇಸ್ , ಸೂರಪ್ಪ, ರಾಜನರಸಿಂಹ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದರು.

ಕನ್ನಡ ಚಿತ್ರರಂಗದ ಹೆಸರಾಂತ ನಟ ಹಿರಿಯ ಕಲಾವಿದ ವೇಣುಗೋಪಾಲ್ ಇಂದು ಬೆಳ್ಳಗೆ ವಿಧಿವಶವಾಗಿದ್ದಾರೆ. ನಗರದ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಹಿರಿಯ ಕಲಾವಿದ ವೇಣುಗೋಪಾಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ಹೆಚ್ಚು ಅಭಿನಯಸಿದ ವೇನುಗೋಪಾರ್ ಡಕೋಟ ಎಕ್ಸ್ಪ್ರೇಸ್ , ಸೂರಪ್ಪ, ರಾಜನರಸಿಂಹ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದರು.

ಜೊತೆಗೆ ಮನೆತನ, ಜನನಿ ಸೇರಿದಂತೆ ಹಲವು ಧಾರವಾಹಿಗಳಲ್ಲಿಯೂ ವೇಣುಗೋಪಾಲ್ ಅವರು ಅಭಿನಯಿಸಿದ್ದರು. ಇತ್ತಿಚಿಗೆ ವೇಣುಗೋಪಾಲ್ ಅವರ ಪುತ್ರ ಪವನ್ ವೇಣುಗೋಪಾಲ್ ಕನ್ನಡದ ಶುದ್ದಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ವೇಣುಗೋಪಾಲ್ ಅವರು ನಟಿಸಿದ ಕೊನೆಯ ಈ ಚಿತ್ರ ಶುದ್ದಿ. ವಿಧಿಆಟ ಇಂದು ವೇಣುಗೋಪಾಲ್ ಅವರು ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇನ್ನು ಇವರ ನಿಧನಕ್ಕೆ ಇಡಿ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ.