ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಭರಾಟೆ ಸೆಟ್‌ನಲ್ಲಿ ಟಾಲಿವುಡ್ ನಟ ಮಹೇಶ್ ಬಾಬು ಭೇಟಿ ನೀಡಿದ್ದರು. ಎರಡು ಭಾಷೆಗಳ ಸಾರ್ ನಟರು ಕೆಲವು ಸಮಯ ಹರಟೆ ಹೊಡೆದ ಕ್ಷಣಗಳ ಫೋಟೋ ವೈರಲ್ ಆಗಿದೆ.
ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಮೂರು ಚಿತ್ರಗಳ ಶೂಟಿಂಗ್ ಆಗುತ್ತಿವೆ. ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್, ಭರಾಟೆ ಚಿತ್ರೀಕರಣದಲ್ಲಿ ಶ್ರೀಮುರಳಿ, ಪೊಗರು ಚಿತ್ರೀಕರಣಕ್ಕಾಗಿ ಧ್ರುವ ಸರ್ಜಾ ಬಹುತೇಕ ಅಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಈ ರಾಮೋಜಿ ಫಿಲ್ಮ್ ಸಿಟಿಯಲ್ಲಿಯೇ ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬ್ ಭೇಟಿಯಾಗಿದ್ದಾರೆ. ಜತೆಯಲ್ಲಿ ಸಾಯಿ ಕುಮಾರ್ ಸಹ ಇದ್ದಾರೆ. ಈ ಮೂವರು ಹರಟುತ್ತಿರುವ ಫೋಟೋ ವೈರಲ್ ಆಗಿದೆ. 'ಭರಾಟೆ' ಚಿತ್ರದಲ್ಲಿ ಸಾಯಿ ಕುಮಾರ್ ಕೂಡ ನಟಿಸುತ್ತಿದ್ದಾರೆ.
ಮಹೇಶ್ ಬಾಬು 'ಮಹರ್ಷಿ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಹಲವು ಸಲ ಭೇಟಿಯಾದ ಈ ಸ್ಟಾರ್ ನಟರು ಸ್ಯಾಂಡಲ್‌ವುಡ್ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಹೆಸರು ಮಾಡುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಮಹೇಶ್ ಬಾಬುಗೆ ಶ್ರೀಮುರುಳಿ ಅಭಿನಯದ ಉಗ್ರಂ ಸಿನಿಮಾ ಬಹಳ ಇಷ್ಟವಂತೆ.
