ಬೆಂಗಳೂರು[ಆ. 18] ರಮ್ಯಾ ಮದುವೆ ಸುದ್ದಿ ಕೇಳಿದ ಜಗ್ಗೇಶ್ ಶುಭಕೋರಿದ್ದಾರೆ. ‘ದೀರ್ಘಸುಂಮಗಲಿಯಾಗಿ ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ. ದೇವರು ಒಳ್ಳೆದು ಮಾಡಲಿ’ ಎಂದು ಹಾರೈಸಿದ್ದಾರೆ.

ರಮ್ಯಾ ಮತ್ತು ಜಗ್ಗೇಶ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ನೀರ್ ದೋಸೆ ಸಿನಿಮಾ, ರಾಜಕಾರಣ, ಮೋದಿ ಅವರನ್ನು ರಮ್ಯಾ ತೆಗಳಿದಾಗ ಜಗ್ಗೇಶ್ ತಮ್ಮದೆ ಶೈಲಿಯಲ್ಲಿ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದರು.

ದುಬೈನಲ್ಲಿ ಮೋಹಕತಾರೆ ರಮ್ಯಾ ಮದುವೆ? ಹುಡುಗ ಎಲ್ಲರಿಗೂ ಗೊತ್ತು!

ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ವರ್ಷ ನಂಬರ್ 1 ನಟಿಯಾಗಿ ಮಿಂಚಿದ್ದ ಮೋಹಕ ತಾರೆ, ರಾಜಕಾರಣಿ ರಮ್ಯಾ ಮದುವೆಯಾಗಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಜಾಲತಾಣದ ಹೆಡ್ ಆಗಿಯೂ ಕೆಲಸ ಮಾಡಿದ್ದ ರಮ್ಯಾ ತಮ್ಮ ಬಹುಕಾಲದ ಗೆಳೆಯ ಪೋರ್ಚುಗಲ್ ದೇಶದ ರಾಫೆಲ್​ ಎಂಬ ಉದ್ಯಮಿಯ ವರಿಸಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಓಡಾಡುತ್ತಿದೆ.