ಕನ್ನಡದ ನಟ ಧ್ರುವ ಸರ್ಜಾಗೆ ಇದೀಗ ಸಂಕಷ್ಟ ಎದುರಾಗಿದೆ. ಧ್ರುವ ಸರ್ಜಾ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಅಕ್ರಮವಾಗಿ ಕಟೌಟ್ ನಿಲ್ಲಿಸಿದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.
ಬೆಂಗಳೂರು: ನಟ ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ರಸ್ತೆಯಲ್ಲಿ ಕಟೌಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಿವರಣೆ ಕೇಳಿ ಧ್ರುವ ಸರ್ಜಾ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಬನಶಂಕರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ತಾರಾನಾಥ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಧ್ರುವ ಸರ್ಜಾರ ವಿರುದ್ಧ ದೂರು ದಾಖಲಾಗಿಲ್ಲ.
ಕಟೌಟ್‌ನಲ್ಲಿ ಧ್ರುವ ಸರ್ಜಾರ ಫೋಟೋ ಇದ್ದ ಕಾರಣ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರ ಹೇಳಿಕೆಯಂತೆ ಯಾರು ಕಟೌಟ್ ಅಳವಡಿಸಿದ್ದರೂ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಬನಶಂಕರಿ ಪೊಲೀಸರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ವಾರ್ಡ್ ಸಂಖ್ಯೆ 167 ರಲ್ಲಿರ ಬರುವ ಕೆ.ಆರ್.ರಸ್ತೆ ಮತ್ತು ಶಾಸ್ತ್ರಿ ನಗರ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಧ್ರುವ ಸರ್ಜಾ ಅವರ ಸುಮಾರು 20 ಅಡಿಯ ಕಟೌಟ್ ಹಾಕಲಾಗಿದೆ.
