ಸಮಯ ಸಿಕ್ಕಾಗಲೆಲ್ಲಾ ದರ್ಶನ್ ಅರಣ್ಯಕ್ಕೆ ಹೋಗಿ ಪ್ರಾಣಿಗಳೊಂದಿಗೆ ಸಮಯ ಕಳೆಯುತ್ತಾರೆ. ಫೋಟೋಗ್ರಫಿ ಮಾಡುತ್ತಾರೆ. ಅಷ್ಟೇ ಅಲ್ಲ ಅರಣ್ಯ ಸಿಬ್ಬಂದಿಗಳ ಕಷ್ಟಗಳಿಗೂ ಸ್ಪಂದಿಸುತ್ತಾರೆ.

 

ಮಾರ್ಚ್ 1 ರಿಂದ 3 ರ ವರೆಗೆ ‘Life on The Wild Side’ ಎಂದು ಛಾಯಚಿತ್ರ ಪ್ರದರ್ಶನವನ್ನು ದರ್ಶನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಇದು ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ನಡೆಯಲಿದೆ. ಈ ಪ್ರದರ್ಶನದಲ್ಲಿ ದರ್ಶನ್ ತೆಗೆದ ಫೋಟೋಗಳನ್ನು ಇಡಲಾಗುತ್ತದೆ. 16*12 ಸೈಜ್ ಫೋಟೋಗಳಿಗೆ ಸುಮಾರು 2 ಸಾವಿರ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಇದರಿಂದ ಸಂಗ್ರಹ ಮಾಡಲಾಗುವ ಹಣವನ್ನು ವನ್ಯಜೀವಿ ಸಂರಕ್ಷಣೆಗೆ ನೀಡಲಾಗುವುದು.