ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ 'ವಿಶ್' ಮಾಡಿದ್ದಾರೆ. ನಟ ಅಂಬರೀಷ್ ಹಾಗೂ ನಟ ದರ್ಶನ್ ಅವರಿಬ್ಬರೂ ಒಟ್ಟಿಗೇ ನಟಿಸಿದ್ದು ಮಾತ್ರವಲ್ಲ, ತುಂಬಾ ಅನ್ಯೋನ್ಯವಾಗಿ ಕೂಡ ಇದ್ದರು ಎಂಬುದು..
ಇಂದು ಕನ್ನಡದ ನಟ, ರೆಬೆಲ್ ಸ್ಟಾರ್ ಅಂಬರೀಷ್ (Rebel Star Ambareesh) ಅವರ 73ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರು ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ 'ವಿಶ್' ಮಾಡಿದ್ದಾರೆ. ನಟ ಅಂಬರೀಷ್ ಹಾಗೂ ನಟ ದರ್ಶನ್ ಅವರಿಬ್ಬರೂ ಒಟ್ಟಿಗೇ ನಟಿಸಿದ್ದು ಮಾತ್ರವಲ್ಲ, ತುಂಬಾ ಅನ್ಯೋನ್ಯವಾಗಿ ಕೂಡ ಇದ್ದರು ಎಂಬುದು ಇಡೀ ಕರ್ನಾಟಕಕ್ಕೆ ತಿಳಿದಿದೆ. ಆದರೆ, ಇತ್ತೀಚೆಗೆ ನಟ ದರ್ಶನ್ ಹಾಗೂ ಸುಮಲತಾ ಅಂಬರೀಷ್ ಮಧ್ಯ 'ಎಲ್ಲವೂ ಸರಿಯಿಲ್ಲ' ಎನ್ನಲಾಗುತ್ತಿದೆ. ಆದರೆ, ಇದೀಗ ನಟ ದರ್ಶನ್ ಮಾಡಿರುವ ಪೋಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ.
ಹಾಗಿದ್ದರೆ ನಟ ದರ್ಶನ್ ಅದೇನು ಪೋಸ್ಟ್ ಮಾಡಿದ್ದಾರೆ. ಇಲ್ಲಿದೆ ನೋಡಿ ಡೀಟೇಲ್ಸ್.. 'ತಂದೆ ಸಮಾನರಾದ ಅಂಬಿ ಅಪ್ಪಾಜಿಯವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರಿಸುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ. ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋನಿ. ವೀ ಲವ್ ಯು ರೆಬೆಲ್ ಸ್ಟಾರ್..' ಎಂದು ಬರೆದು ನಟ ದರ್ಶನ್ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ, ನಟ ದರ್ಶನ್ ಅವರು ಕಳೆದ ವರ್ಷ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ಕೇಸ್ ಎದುರಿಸುತ್ತಿರುವುದು ಗೊತ್ತೇ ಇದೆ. ಇದೀಗ ನಟ ದರ್ಶನ್ ಅವರು 'ದಿ ಡೆವಿಲ್' ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇದೀಗ ಕೋರ್ಟ್‌ನಲ್ಲಿ ಆರಂಭವಾಗೊದೆ. ನಟ ದರ್ಶನ್ ಅರ್ಜಿ 64ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ಆರಂಭ ಆಗಿದ್ದು, ದರ್ಶನ್ ಪರವಾಗಿ ವಕೀಲ ಲಕ್ಷ್ಮೀಕಾಂತ್ ವಾದ ಮಾಡುತ್ತಿದ್ದಾರೆ.
ಯಾವುದೇ ಕಾರಣಕ್ಕೆ ವಿದೇಶಕ್ಕೆ ಹೋಗುವುದಿದ್ದರೆ ಸೆಷನ್ಸ್ ಕೋರ್ಟ್ ಅನುಮತಿ ಪಡೆದು ತೆರಳು ಷರತ್ತು ವಿಧಿಸಿದೆ.. ದರ್ಶನ್ ಚಿತ್ರನಟ ಆಗಿದ್ದು ನಟನೆ ಅಷ್ಟೇ ಅವರ ದುಡಿಮೆ, ಹೀಗಾಗಿ ಚಿತ್ರೀಕರಣ ಕ್ಕೆ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಆದರೆ, ನಟ ದಶ್ನ್ ಅವರು ಎಲ್ಲಿಗೆ ಹೋಗ್ತಾರೆ, ವಿದೇಶದಲ್ಲಿ ಎಲ್ಲಿ ಉಳಿಯುತ್ತಾರೆ ಎಂಬ ಸಂಪೂರ್ಣ ವಿವರಗಳಿಲ್ಲ. ಹೀಗಾಗಿ ಅವಕಾಶ ನೀಡದಂತೆ ಎಸ್ಪಿಪಿ ಪರವಾಗಿ ವಾದ ಮಂಡಿಸಲಾಗುತ್ತಿದೆ.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಆದೇಶ ಕಾಯ್ದಿರಿಸಿದೆ. ಮೇ.30ಕ್ಕೆ ಕೋರ್ಟ್ ಆದೇಶ ನೀಡಲಿದೆ ಎನ್ನಲಾಗಿದೆ. ಇಂದು ನ್ಯಾಯಾಧೀಶ ಐ.ಪಿ.ನಾಯ್ಕ್ ಅವರಿಂದ ವಿಚಾರಣೆ ಅಗಿದೆ. ಡೆವಿಲ್ ಸಿನಿಮಾ ಚಿತ್ರೀಕರಣಕ್ಕಾಗಿ ಅನುಮತಿ ಕೋರಿರುವ ದರ್ಶನ್, ಜೂ.1ರಿಂದ 25ರ ವರೆಗೆ ಅನುಮತಿ ಕೋರಿರುವ ದರ್ಶನ್, ದುಬೈ, ಯೂರೋಪ್ ಗೆ ತೆರಳಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಈ ಆದೇಶವನ್ನು ನಾಳೆ ನೀಡಲಿದೆ. ನಟ ದರ್ಶನ್ ಪರವಾಗಿ ಆದೇಶ ಹೊರಬೀಳುತ್ತಾ ಅಥವಾ ವಿರುದ್ಧವಾಗಿಯೋ ಎಂಬುದೀಗ ತೀವ್ರ ಕುತೂಹಲ ಕೆರಳಿಸಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಡೆವಿಲ್ ಚಿತ್ರವನ್ನು ಮಿಲನಾ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಡೈರೆಕ್ಷನ್ ಶುರುವಿನಲ್ಲಿ ಅವರು ತಮ್ಮ ಹೆಸರನ್ನು 'ಪ್ರಕಾಶ್ ವೀರ್' ಎಂದು ಬದಲಾಯಿಸಿಕೊಂಡಿದ್ದಾರೆ. ಇದೀಗ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಇದೇ ವರ್ಷ ದರ್ಶನ್ ತೂಗುದೀಪ ನಟನೆಯ ಈ ಚಿತ್ರವು ಬಿಡುಗಡೆ ಕಾಣಲಿದೆ.
