ಅತ್ತ ಬಾಲಿವುಡ್‌ನಲ್ಲಿ ನಟ, ನಟಿಯರು ಸಪ್ತಪದಿ ತುಳಿಯುತ್ತಿದ್ದರೆ, ಇತ್ತ ಸ್ಯಾಂಡಲ್‌ವುಡ್‌ ಕಲಾವಿದರೂ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಮೊನ್ನೆಯಷ್ಟೇ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾಳನ್ನು ವರಿಸಿದರೆ, ಇಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆಟಗಾರ ಹಾಗೂ ನಟ ರಾಜೀವ್, ರೇಷ್ಮಾರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಸಿಸಿಎಲ್‌ನ ಕಿಚ್ಚಾ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಸರ್ಸ್ ತಂಡದ ಪ್ರಭಾವಿ ಆಟಗಾರನೆಂದೇ ಫೇಮಸ್ ಆದವರು ರಾಜೀವ್. ಇನ್ನು ‘ಉಸಿರೇ ಉಸಿರೇ’ ‘ಆರ್‌ಎಕ್ಸ್ ಸೂರಿ’ ‘ಅಮವಾಸ್ಯೆ ’ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಅಷ್ಟೇ ಅಲ್ಲದೆ ಕಿಚ್ಚ ದಂಪತಿ ಸಮ್ಮುಖದಲ್ಲಿ ರಾಜೀವ್ ಮದುವೆಯಾಗಿದ್ದಾರೆ. ದಯಾನಂದ್ ಸಾಗರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ರೇಷ್ಮಾ ಕೈ ಹಿಡಿದಿದ್ದಾರೆ.

ರಾಜೀವ್ ಹಾಗೂ ರೇಷ್ಮಾ ಅವರ ನಿಶ್ಚಿತಾರ್ಥ ನವೆಂಬರ್ 9ರಂದು ನಡೆದಿತ್ತು. ಕಿಚ್ಚ ದಂಪತಿಯೊಂದಿಗೆ ಕೆಲವು ಸ್ಯಾಂಡಲ್‌ವುಡ್ ನಟ, ನಟಿಯರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.