Asianet Suvarna News Asianet Suvarna News

Y Plus ಸೆಕ್ಯುರಿಟಿ ಪ್ರಶ್ನಿಸಿದ ಸುಬ್ರಮಣ್ಯನ್‌ ಸ್ವಾಮಿಗೆ ಕಂಗನಾ ರಣಾವತ್‌ ತಿರುಗೇಟು!

ಬಾಲಿವುಡ್‌ ನಟಿ ಕಂಗನಾ ರಣಾವತ್‌ಗೆ ವೈ ಪ್ಲಸ್‌ ಸೆಕ್ಯುರಿಟಿ ನೀಡಿದ ವಿಚಾರವನ್ನು ಸುಬ್ರಮಣ್ಯನ್‌ ಸ್ವಾಮಿ ಇತ್ತೀಚೆಗೆ ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲಿಯೇ ನಟಿ ಟ್ವಿಟರ್‌ನಲ್ಲಿಯೇ ಇದಕ್ಕೆ ತಿರುಗೇಟು ನೀಡಿದ್ದಾರೆ.
 

Kangana Ranaut Y Plus Security questioned  by Subramanian Swamy Actress Hits Back san
Author
First Published Jul 31, 2023, 4:03 PM IST

ಮುಂಬೈ (ಜು.31): ಹೃತಿಕ್‌ ರೋಶನ್‌ ಮತ್ತು ರಣಬೀರ್‌ ಕಪೂರ್‌ ಕುರಿತಾಗಿ ಪ್ರತಿ ಬಾರಿಯೂ ಟೀಕೆ ಮಾಡುತ್ತಿದ್ದ ಕಂಗನಾ ರಣಾವತ್‌ ಎಲ್ಲಿದ್ದಾರೆ ಈಗ ಎಂದು ಪ್ರಶ್ನೆ ಮಾಡಿದ್ದ ಪೋಸ್ಟ್‌ಅನ್ನು ಒಬ್ಬರು ಹಂಚಿಕೊಂಡಿದ್ದರು. ಈ ವೈರಲ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಸುಬ್ರಮಣ್ಯನ್‌ ಸ್ವಾಮಿ , ಈಕೆ ಎಲ್ಲಿದ್ದಾರೆ ಎನ್ನುವುದು ಸ್ಪೆಷಲ್‌ ಪ್ರೊಟಕ್ಷನ್‌ ಗ್ರೂಪ್‌ಗೆ (ಎಸ್‌ಪಿಜಿ) ಮಾತ್ರವೇ ತಿಳಿದಿರುತ್ತದೆ ಎಂದು ಟ್ವೀಟ್‌ ಮಾಡಿದ್ದರು. ಅದರೊಂದಿಗೆ ಕಂಗನಾ ರಣಾವತ್‌ಗೆ ನೀಡಿರುವ ವೈ ಪ್ಲಸ್‌ ಸೆಕ್ಯುರಿಟಿ ಬಗ್ಗೆಯೂ ಅವರು ಪ್ರಶ್ನೆ ಮಾಡಿದ್ದರು. 'ಇದು ಎಸ್‌ಪಿಜಿಗೆ ಮಾತ್ರವೇ ಗೊತ್ತಿರಲಿ ಸಾಧ್ಯ. ಆಕೆಯ ಚಲನವಲಗಳನ್ನು ಅವರು ರಿಜಿಸ್ಟರ್‌ ಮಾಡಿ ಇಟ್ಟುಕೊಂಡಿರುತ್ತಾರೆ. ಬಾಲಿವುಡ್‌ ಸ್ಟಾರ್‌ಅನ್ನು ಟ್ರ್ಯಾಕ್‌ ಮಾಡುವುದು ಎಸ್‌ಪಿಜಿಯ ಕೆಲಸವಲ್ಲ. ಹಾಗಿದ್ದರೂ ಆಕೆಗೆ ಈ ಭದ್ರತೆ ನೀಡಿರುವುದು ಅಚ್ಚರಿ ತಂದಿದೆ. ಈಕೆಯ ವಿಚಾರ ಹೇಳುವುದಾದರೆ, ವಿಶೇಷ ಸಂದರ್ಭದಲ್ಲಿ ಆಕೆಗೆ ಹೆಚ್ಚಿನ ಮಟ್ಟದ ಭದ್ರತೆಯನ್ನು ಒದಗಿಸಲಾಗಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಮರ್ಥಿಸಿಕೊಂಡ ಕಂಗನಾ: ಇನ್ನು ಸುಬ್ರಮಣ್ಯನ್‌ ಸ್ವಾಮಿ ಅವರ ಟ್ವೀಟ್‌ಗೆ ಕಂಗನಾ ರಣಾವತ್‌ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದು, ನಾನು ಕೇವಲ ಬಾಲಿವುಡ್‌ ಸ್ಟಾರ್ ಮಾತ್ರವೇ ಅಲ್ಲ ಎಂದಿದ್ದಾರೆ.

"ನಾನು ಕೇವಲ ಬಾಲಿವುಡ್ ಸ್ಟಾರ್ ಅಲ್ಲ ಸರ್, ನಾನು ತುಂಬಾ ಬಡವರ ಪರ ದನಿ ಎತ್ತುವ ಮತ್ತು ಕಾಳಜಿಯುಳ್ಳ ನಾಗರಿಕ, ನಾನು ಮಹಾರಾಷ್ಟ್ರದಲ್ಲಿ ರಾಜಕೀಯ ದುರುದ್ದೇಶಕ್ಕೆ ಗುರಿಯಾಗಿದ್ದೇನೆ, ನನ್ನ ವೆಚ್ಚದಲ್ಲಿ ರಾಷ್ಟ್ರೀಯವಾದಿಗಳು ಇಲ್ಲಿ ಸರ್ಕಾರ ಮಾಡಬಹುದು. ನಾನು ತುಕ್ಡೆ ಗ್ಯಾಂಗ್ ಬಗ್ಗೆ ಮಾತನಾಡಿದ್ದೇನೆ ಮತ್ತು ಖಲಿಸ್ತಾನಿ ಗುಂಪುಗಳನ್ನು ಬಲವಾಗಿ ಖಂಡಿಸಿದ್ದೇನೆ. ನಾನು ಚಲನಚಿತ್ರ ನಿರ್ಮಾಪಕಿ, ಬರಹಗಾರ್ತಿ. ನನ್ನ ಮುಂದಿನ ನಿರ್ಮಾಣದ ಸಿನಿಮಾ ತುರ್ತು ಪರಿಸ್ಥಿತಿಯ ಬ್ಲೂಸ್ಟಾರ್ ಅನ್ನು ಒಳಗೊಂಡಿರುತ್ತದೆ ... ನನ್ನ ಜೀವಕ್ಕೆ ಸ್ಪಷ್ಟವಾದ ಬೆದರಿಕೆ ಇದೆ. ಆದ್ದರಿಂದ ನಾನು ವಿಸ್ತೃತ ಭದ್ರತೆಗಾಗಿ ವಿನಂತಿಸಿದೆ ... ಇದರಲ್ಲಿ ಏನಾದರೂ ತಪ್ಪಾಗಿದೆಯೇ ಸರ್?' ಎಂದು ಪ್ರಶ್ನೆ ಮಾಡಿದ್ದಾರೆ.

ರಣವೀರ್ ಸಿಂಗ್‌ಗೆ ಕಾರ್ಟೂನ್‌ ಎಂದ ಕಂಗನಾ ಕರಣ್‌ ಜೋಹರ್‌ ನಿವೃತ್ತಿಯಾಗಲಿ ಎಂದು ಕಿಡಿ

ಕಂಗನಾಗೆ ಭದ್ರತೆ ನೀಡಿದ್ದೇಕೆ: ಶಿವಸೇನಾ ನಾಯಕ ಸಂಜಯ್ ರಾವತ್ ಅವರೊಂದಿಗೆ ವಾಕ್ಸಮರದ ನಂತರ ಮತ್ತು ತಾನು ಅಸುರಕ್ಷಿತ ಎಂದು ಭಾವಿಸಿದ ನಂತರ ನಟಿಗೆ ಗೃಹ ಸಚಿವಾಲಯ (MHA) ಸಿಆರ್‌ಪಿಎಫ್‌ ಭದ್ರತೆಯ ವೈ-ಪ್ಲಸ್ ವರ್ಗವನ್ನು ಒದಗಿಸಿದೆ. 2020ರಲ್ಲಿ ಕೇಂದ್ರ ಸರ್ಕಾರ ಈಕೆಗೆ ಭದ್ರತೆ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. 'ಇದು ನಮ್ಮ ದೇಶದ ಪರಿಸ್ಥಿತಿ. ಇಂಥ ವ್ಯಕ್ತಿಗಳಿಗೂ ಸೇನೆ ಭದ್ರತೆ ನೀಡಬೇಕಿದೆ. ಹಾಗೂ ರೈತರ ಮೇಲೆ ಹಲ್ಲೆಗಳನ್ನು ಮಾಡಲಾಗುತ್ತಿದೆ' ಎಂದು ಸೋಶಿಯಲ್‌ ಮೀಡಿಯಾದಲ್ಲಿಬರೆದುಕೊಂಡಿದ್ದರು. ನಮ್ಮದೇ ಹಣದಲ್ಲಿ ಭದ್ರತೆ ತೆಗೆದುಕೊಳ್ಳುವ ಆಕೆ ನಮ್ಮದೇ ರೈತರನ್ನು ತೆಗಳುತ್ತಾಳೆ ಎಂದು ಟ್ವೀಟ್‌ ಮಾಡಿದ್ದರು.

ಮನಸ್ಸಿನ ವಿಚಿತ್ರ ಲವ್ ಕೋರಿಕೆ ಹೇಳಿದ ಕಂಗನಾ: ಯಾರಪ್ಪಾ ಬಲಿಪಶು ಅಂತಿದ್ದಾರೆ ಫ್ಯಾನ್ಸ್​!

Follow Us:
Download App:
  • android
  • ios