Asianet Suvarna News Asianet Suvarna News

ಕುದುರೆ ಏರಿ ಖಡ್ಗ ಹಿಡಿದ ಕಂಗನಾ; ಮಣಿಕರ್ಣಿಕಾ ಟ್ರೇಲರ್ ರಿಲೀಸ್

ಹೊಸ ಲುಕ್‌ನಲ್ಲಿ ಕಂಗನಾ | ಸ್ವತಂತ್ರ ಹೋರಾಟದ ಕಿಚ್ಚು ಹಚ್ಚಿದ ಕಂಗನಾ |  ಝಾನ್ಸಿ ರಾಣಿಯಾಗಿ ಆರ್ಭಟಿಸುತ್ತಿದ್ದಾರೆ ಕಂಗನಾ 

Kangana Ranaut's Manikarnika Trailer released
Author
Bengaluru, First Published Dec 18, 2018, 3:40 PM IST

ಬೆಂಗಳೂರು (ಡಿ. 18): ಸ್ಥಿಗ್ನ ಸುಂದರಿ, ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ತಮ್ಮ ಇಮೇಜ್ ನಿಂದ ಹೊರ ಬಂದಿದ್ದಾರೆ. ಕೈಯಲ್ಲಿ ಖಡ್ಗ ಹಿಡಿದು ಕುದುರೆ ಏರಿ ಯುದ್ಧಭೂಮಿಯಲ್ಲಿ ಆರ್ಭಟಿಸುತ್ತಾರೆ ಮಣಿಕರ್ಣಿಕಾ ಅಲಿಯಾಸ್ ಕಂಗನಾ. ಆಕೆ ಆರ್ಭಟಿಸುವ ರೀತಿ ನೋಡಿದರೆ ಎಂಥವರಿಗೂ ಮೈ ಜುಂ ಎನ್ನುತ್ತದೆ. 

ಭಾರೀ ನಿರೀಕ್ಷೆ ಹುಟ್ಟಿಸಿದ್ದ ಮಣಿಕರ್ಣಿಕಾ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಕಂಗನಾ ಝಾನ್ಸಿ ರಾಣಿಯಾಗಿ ಘರ್ಜಿಸುತ್ತಿದ್ದಾರೆ. ಮಣಿಕರ್ಣಿಕಳಾಗಿ ಕಂಗನಾ ಅದ್ಭುತವಾಗಿ ನಟಿಸಿದ್ದಾರೆ. ಮಣಿ ಕರ್ಣಿಕಾ ಝಾನ್ಸಿ ರಾಜನನ್ನು ವಿವಾಹವಾಗುತ್ತಾಳೆ. ಕಾಲ ಚಕ್ರ ಬದಲಾಗುತ್ತದೆ. ಏರಿಳಿತಗಳು ಆಗುತ್ತದೆ. ಆಕೆ ಗಂಡನನ್ನು ಕಳೆದುಕೊಳ್ಳುತ್ತಾಳೆ. ಈಸ್ಟ್ ಇಂಡಿಯಾ ಕಂಪನಿ ಝಾನ್ಸಿಯನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗುತ್ತದೆ. ಆದರೆ ಲಕ್ಷ್ಮೀ ಬಾಯಿ ಇದಕ್ಕೆ ಸಿದ್ದಳಿರುವುದಿಲ್ಲ. ಬ್ರಿಟಿಷರ ವಿರುದ್ಧ ತಿರುಗಿ ಬೀಳುತ್ತಾರೆ. ತನ್ನ ಕೊನೆ ಉಸಿರಿರುವ ತನಕ ಬ್ರಿಟಿಷರ ವಿರುದ್ಧ ಹೋರಾಡುತ್ತಾಳೆ.ಸ್ವಾಭಿಮಾನ, ಶೌರ್ಯ, ಸಾಹಸ, ಧೈರ್ಯದ ಪ್ರತೀಕ ಮಣಿಕರ್ಣಿಕ. 

ರೋಮಾಂಚನ ಹುಟ್ಟಿಸುವ ಮಣಿಕರ್ಣಿಕಾ ವಿಡಿಯೋ ಇಲ್ಲಿದೆ ನೋಡಿ. 

 

Follow Us:
Download App:
  • android
  • ios