ವಿದ್ಯಾವಂತ ಹಳ್ಳಿ ಹುಡುಗಿಯ ಸಿಟಿ ಲೈಫ್ ಜಂಜಾಟ ಅದರ ಜೊತೆ ಪಾಶ್ ಕುಟುಂಬದವರ ಸಂಬಂಧ ಸೈಡಲ್ಲಿ ಗುರುಗಳ ಜೊತೆ ಲವ್, ಫ್ಯಾಮಿಲಿ ಎಂಟರ್ಟೇನ್‌ಮೆಂಟ್ ಧಾರಾವಾಹಿ ಇದಾಗಿದ್ದು ಜನರು ಮಿಸ್ ಮಾಡದೇ 7 ಗಂಟೆಗೆ ಟಿವಿ ಮುಂದೆ ಕೂರುವುದು ತಪ್ಪಲ್ಲ.

ಕಮಲಿಯ ರಿಯಲ್ ಗ್ಲಾಮರಸ್ ಲುಕ್ ಇದು...

ಗೌರಿ ಪಾತ್ರಧಾರಿ ಯಮುನಾ ಶ್ರೀನಿಧಿ ಸೀರಿಯಲ್ ಸೆಟ್‌ನಲ್ಲಿ ತಮ್ಮ ರಿಯಲ್ ಲೈಫ್ ಹಾಗೂ ರೀಲ್ ಲೈಫ್ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಕೆಲ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು 'ನಾನು ಕೆಲಸ ಮಾಡುವ ಸ್ಥಳಕ್ಕೆ ನನ್ನ ಮುದ್ದಿನ ಮಕ್ಕಳು ಭೇಟಿ ಮಾಡಿ ನನ್ನ ಕೆಲಸದ ಬಗ್ಗೆ ಟೀಕಿಸಿದರೆ ನನಗೆ ಇಷ್ಟವಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.

 

ಯಮುನಾ ಈ ಹಿಂದೆ ‘ಡ್ಯಾನ್ಸ್ ಸಮರ’ ಎಂದು ರಿಯಾಲಿಟಿ ಶೋನಲ್ಲಿ ತೀರ್ಪುಗಾರಗಾಗಿ ಕಾಣಿಸಿಕೊಂಡಿದ್ದರು.