ಶೇ.90 ಮತಗಳು ರಾಜಕೀಯಕ್ಕೆ ಹೋಗುತ್ತವೆ, ಸಿನೆಮಾಕ್ಕಾಗಿ ಅಲ್ಲ’
ಚೆನ್ನೈ(ಅ.08): ತಮಿಳು ಸಿನೆಮಾ ಸೂಪರ್‌ಸ್ಟಾರ್‌ಗಳಾದ ಕಮಲ್ ಹಾಸನ್ ಮತ್ತು ರಜನೀಕಾಂತ್ ರಾಜಕೀಯ ಪ್ರವೇಶಿಸುವ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಆದರೆ ಇಬ್ಬರು ಹಿರಿಯ ನಟರು ಜೊತೆಯಾಗಿ ರಾಜಕೀಯ ಮಾಡಿದರೂ, ಶೇ. 10ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯ ಬಗ್ಗೆ ಕಮಲ್ ಸಹೋದರ ಚಾರು ಹಾಸನ್ ಸಂಶಯ ವ್ಯಕ್ತಪಡಿಸಿದ್ದಾರೆ.
‘ಕಮಲ್ ಮತ್ತು ರಜನಿಗೆ ರಾಜಕೀಯದಲ್ಲಿ ಉತ್ತಮ ಅವಕಾಶವಿದೆ ಎಂದು ನನಗನಿಸುತ್ತಿಲ್ಲ. ನನ್ನ ಲೆಕ್ಕಾಚಾರಗಳ ಪ್ರಕಾರ, ಅವರಿಬ್ಬರು ಜೊತೆಯಾಗಿ ಪಕ್ಷ ಕಟ್ಟಿದರೂ, ಅವರಿಗೆ ಶೇ.10 ಮತಗಳು ಬರುವುದೂ ಸಂಶಯ. ಶೇ.90 ಮತಗಳು ರಾಜಕೀಯಕ್ಕೆ ಹೋಗುತ್ತವೆ, ಸಿನೆಮಾಕ್ಕಾಗಿ ಅಲ್ಲ’ ಎಂದು ಚಾರು ಹಾಸನ್ ಹೇಳಿದ್ದಾರೆ. ಇಬ್ಬರು ಜೊತೆ ಸೇರಿ ಪಕ್ಷ ಸ್ಥಾಪಿಸುವ ಸಾಧ್ಯತೆಯ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದಿದ್ದಾರೆ.
