ಬಾಲಿವುಡ್ ಬೆಡಗಿ ಕಾಜೋಲ್ ದೇವಗನ್ ಜನ ಸಮಾನ್ಯರೊಂದಿಗೆ ಇತ್ತೀಚೆಗೆ ಮುಂಬೈನ  ಫಿನಿಕ್ಸ್ ಮಾಲ್‌ನಲ್ಲಿ ಹೆಲ್ತ್ ಆ್ಯಂಡ್ ಗ್ಲೋ ಅಂಗಡಿ ಬಿಡುಗಡೆ ಸಮಾರಂಭಕ್ಕೆ ತೆರಳುವಾಗ ಕಾಲು ಜಾರಿ ಬಿದ್ದಿದ್ದರು. ಅದೃಷ್ಟವಶಾತ್ ಯಾವ ತೊಂದರೆಯೂ ಆಗಲಿಲ್ಲ. ಪಕ್ಕವೇ ನಿಂತಿದ್ದ ಸೆಕ್ಯುರಿಟಿ, ತೊಂದರೆಯಾಗದಂತೆ ನೋಡಿಕೊಂಡರು.

'ಕುಛ್ ಕುಛ್ ಹೋತಾ ಹೈ' ಚಿತ್ರದ ಮೂಲಕ ಫೇಮಸ್ ಆದ ಕಾಜೋಲ್ ತನ್ನ ಕೂಡಿದ ಉಬ್ಬಿನಿಂದ ಟ್ರೇಂಡ್ ಸೆಟ್ ಮಾಡಿದವರು. ನಂತರ ಬಾಲಿವುಡ್ ನಟ- ನಿರ್ದೆಶಕ ಅಜಯ್ ದೇವಗನ್ ವರಿಸಿ, ಸಂಪೂರ್ಣವಲ್ಲದಿದ್ದರೂ ಸಿನಿ ಜಗತ್ತಿನಿಂದ ಮರೆಯಾದವರು. ನಸ್ಯ ಹಾಗೂ ಯುಗ್ ಎಂಬ ಮಕ್ಕಳಿಗೆ ತಾಯಿಯಾಗಿ, ಒಳ್ಳೆ ಪತ್ನಿ ಹಾಗೂ ಸೊಸೆ ಎಂಬ ಸುದ್ದಿಗಳು ಈ ನಟಿ ಬಗ್ಗೆ ಹರಿದಾಡುತ್ತಲೇ ಇರುತ್ತವೆ.

ಸಿನಿಮಾ ರಂಗಕ್ಕೆ ಮತ್ತೆ ಹಾಟ್ ಬೆಡಗಿಯಾಗಿ ಎಂಟ್ರಿ ಕೊಟ್ಟಿದ್ದು, ಬಾಲಿವುಡ್‌ನಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹದಿವಯಸ್ಸಿನ ಮಕ್ಕಳ ತಾಯಿಯಾದರೂ, ಕಾಜೋಲ್ ಫ್ಯಾಷನ್‌ ಸ್ಟೇಟ್‌ಮೆಂಟ್ ಕೊಡುವುದರಲ್ಲಿ ಸದಾ ಮುಂದೆ.