ನವದೆಹಲಿ (ಆ.08): ಕರಣ್ ಜೋಹರ್ ನಿರ್ದೇಶನದಲ್ಲಿ ಕಾಜೋಲ್ ಅಭಿನಯದ ಚಿತ್ರಗಳು ಬಾಲಿವುಡ್’ನಲ್ಲಿ ಸಕತ್ ಹಿಟ್ ಮಾಡಿವೆ. ಇವರಿಬ್ಬರ ಕಾಂಬಿನೇಶನ್ ಯಾವಾಗಲೂ ವರ್ಕೌಟ್ ಆಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಇವರಿಬ್ಬರು  ಬೆಸ್ಟ್ ಫ್ರೆಂಡ್ಸ್. ಕಾಜೋಲ್ ಮತ್ತು ಕರಣ್ ಜೋಹರ್ ನಡುವೆ ಕಾರಣಾಂತರದಿಂದ ಭಿನ್ನಾಬಿಪ್ರಾಯ ಬಂದಿತ್ತು.

ಇದೀಗ ಕಾಜೋಲ್ ಮತ್ತು ಕರಣ್ ಜೋಹರ್ ಮತ್ತೆ ಒಂದಾಗಿದ್ದಾರೆ. ಕರಣ್ ಜೋಹರ್ ಕಾಜೋಲ್’ರನ್ನು ಇನ್ಸ್ಟಾಗ್ರಾಮ್’ನಲ್ಲಿ ಫಾಲೋ ಮಾಡುತ್ತಿದ್ದಾರೆ. ಕರಣ್ ಜೋಹರ್ ಅವಳಿ ಮಕ್ಕಳನ್ನು ದತ್ತು ತೆಗೆದುಕೊಂಡಾಗ ಕಾಜೋಲ್ ಅವರ ಪೋಸ್ಟನ್ನು ಲೈಕಿಸಿದ್ದರು.  ವಾರಾಂತ್ಯದಲ್ಲಿ ನಡೆಯುವ ಕಾಜೋಲ್ ಬರ್ತ್ ಡೇ ಪಾರ್ಟಿಗೆ ಕಾಜೋಲ್ ಕರ್ಣ್ ಜೋಹರ್’ಗೆ ಟೆಕ್ಸ್ಟ್ ಮಾಡಿ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇವರಿಬ್ಬರೂ ಮತ್ತೆ ಹೊಸ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ.