ಸೂಪರ್ ಸ್ಟಾರ್ ಚಿರಂಜೀವಿ ಬರೋಬ್ಬರಿ 9 ವರ್ಷಗಳ ಬಳಿಕ ತೆಲುಗು ಸಿನಿಮಾ 'ಕೈದಿ ನಂಬರ್ 150' ಮೂಲಕ ಮತ್ತೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಈ 'ಕೈದಿ ನಂಬರ್ 150' ತಮಿಳಿನ 'ಕಥ್ಥಿ' ಸಿನಿಮಾದ ರಿಮೇಕ್ ಆಗಿದ್ದು, ಬುಧವಾರದಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು.

ಚಿರಂಜೀವಿಯ 'ಕೈದಿ ನಂಬರ್ 150' ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದು, ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ತೆಲುಗು ರಾಜ್ಯಗಳಲ್ಲಿ 9 ಕೋಟಿ ಬಾಚಿಕೊಂಡಿದೆ. ಇನ್ನು ಎರಡು ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾ ಮಾಡಿದ ಕಲೆಕ್ಷನ್ ಬರೋಬ್ಬರಿ 47 ಕೋಟಿ.
ವಿ. ವಿ ವಿನಾಯಕ್ ನಿರ್ದೇಶನದಲ್ಲಿ ಮೂಡಿ ಬಂದ 'ಕೈದಿ ನಂಬರ್ 150' ಸಿನಿಮಾದಲ್ಲಿ ಚಿರಂಜೀವಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಇದು ಕೂಡಿ ಹಾಕಿದ ಮೊತ್ತವನ್ನು ನೋಡಿದರೆ ಮುಂದಿನ ದಿನಗಳಲ್ಲಿ ಇದು ಹಲವಾರು ದಾಖಲೆಗಳನ್ನು ಮುರಿಯಲಿದೆ, ಇದರಲ್ಲಿ ದಂಗಲ್ ಕೂಡಾ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.