ಬಾಲಿವುಡ್ ಹಿರಿಯ ನಟಿ ಮೀನಾ ಕುಮಾರಿ/ ಮಧುಬಾಲಾ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ನಟನೆಗೆ ಮಾರು ಹೋಗದವರೇ ಇಲ್ಲ. ಚಿತ್ರರಂಗ ಕಂಡ ಮೇರು ನಟಿಯರವರು. ಅವರ ಬಗ್ಗೆ ಜೀವನ ಚಿತ್ರ ಬಂದ್ರೆ ಹೇಗಿರುತ್ತೆ? ಯಾರು ಮಾಡ್ತಾ ಇದ್ದಾರೆ?
ಮುಂಬೈ (ಜು. 15): ಒಂದು ವೇಳೆ ಅವಕಾಶ ಸಿಕ್ಕರೆ ಹಿರಿಯ ನಟಿ ಮೀನಾ ಕುಮಾರಿ ಅಥವಾ ಮಧುಬಾಲಾ ಪಾತ್ರ ಮಾಡಲು ನನಗಿಷ್ಟವಿದೆ ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೀನಾ ಕುಮಾರಿ, ಮಧುಬಾಲಾ ಜೀವನ ಚರಿತ್ರೆ ಓದಿಕೊಂಡಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ. ಅವರಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದು ಮುಂಬರುವ ಚಿತ್ರ ದಡಕ್ ಪ್ರಮೋಶನ್ ವೇಳೆ ಹೇಳಿದ್ದಾರೆ.
ಜಾಹ್ನವಿ ಕಪೂರ್ ಮೊಟ್ಟ ಮೊದಲ ಸಿನಿಮಾ ದಢಕ್ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಚಿತ್ರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ದಢಕ್ ಚಿತ್ರದ ಟ್ರೇಲರನ್ನು ಒಮ್ಮೆ ನೋಡಿ ಬಿಡಿ.

