ಜಾಹ್ನವಿ ಕಪೂರ್, ಸಾರಾ ಅಲಿ ಖಾನ್ ನಡುವೆ ಕಾಂಪಿಟೇಶನ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Jul 2018, 4:25 PM IST
Janhvi Kapoor on competition with Sara Ali Khan
Highlights

ಜಾಹ್ನವಿ ಕಪೂರ್ ದಢಕ್ ಚಿತ್ರದ ರೆಸ್ಪಾನ್ಸ್ ನೋಡಿ ಎಕ್ಸೈಟ್ ಆಗಿದ್ದಾರೆ. ಪ್ರೇಕ್ಷಕರು ಜಾಹ್ನವಿಯನ್ನು ಇಷ್ಟಪಟ್ಟಿದ್ದಾರೆ. ಇದೀಗ ಜಾಹ್ನವಿಗೆ ಕಾಂಪಿಟೇಶನ್ ಕೊಡಲು ಸಾರಾ ಅಲಿಖಾನ್ ಬರುತ್ತಿದ್ದಾರೆ. ಇಬ್ಬರೂ ಬಾಲಿವುಡ್’ಗೆ ಹೊಸ ಮುಖಗಳಾಗಿದ್ದು, ಇಬ್ಬರಿಗೂ ಇದು ಒಂದು ರೀತಿ ಚಾಲೆಂಜ್ ಅಂದರೆ ತಪ್ಪಾಗಲಿಕ್ಕಿಲ್ಲ. 

ಮುಂಬೈ (ಜು. 20): ಬಹು ನಿರೀಕ್ಷಿತ ಜಾಹ್ನವಿ ಕಪೂರ್ ದಢಕ್ ಚಿತ್ರ ಬಿಡುಗಡೆಯಾಗಿದೆ. ಸಿಕ್ಕಾಪಟ್ಟೆ ರೆಸ್ಪಾನ್ಸ್ ಕೂಡಾ ಸಿಗುತ್ತಿದೆ. ಜನರ ರೆಸ್ಪಾನ್ಸ್ ನೋಡಿ ಜಾಹ್ನವಿ ಫುಲ್ ಎಕ್ಸೈಟ್ ಆಗಿದ್ದಾರೆ. 

ಸೈಫ್ ಅಲಿ ಖಾನ್ ಮಗಳು ಸಾರಾ ಅಲಿಖಾನ್ ಕೂಡಾ ಬಾಲಿವುಡ್’ಗೆ ಕಾಲಿಡಲು ಸಿದ್ದರಾಗಿದ್ದಾರೆ. ಜಾಹ್ನವಿ ಹಾಗೂ ಸಾರಾ ಅಲಿ ಖಾನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಸಾರಾ ಅಲಿ ಖಾನ್ ಕೇದಾರನಾಥ ಚಿತ್ರದ ಮೂಲಕ ಬಾಲಿವುಡ್’ಗೆ ಎಂಟ್ರಿ ಕೊಡಲಿದ್ದಾರೆ. ಜಾಹ್ನವಿ ಹಾಗೂ ಸಾರಾ ಇಬ್ಬರೂ ಹೊಸ ಬಾಲಿವುಡ್’ಗೆ ಹೊಸ ಮುಖಗಳು. ಇಬ್ಬರ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿವೆ. 

ಈ ಬಗ್ಗೆ ಜಾಹ್ನವಿ ಮಾತನಾಡಿ, ಇದು ಉಳಿವಿಗಾಗಿ ಹೋರಾಟವಲ್ಲ. ಸಾರಾರನ್ನು ತೆರೆ ಮೇಲೆ ನೋಡಲು ಎಕ್ಸೈಟ್ ಆಗಿದ್ದೇನೆ. ಅವರ ಹೊಸ ಚಿತ್ರ ಧೂಳಿಪಟವೆಬ್ಬಿಸುತ್ತದೆ ಎಂಭ ಭರವಸೆಯಿದೆ. ಬಾಲಿವುಡ್’ಗೆ ಹೊಸ ಹೊಸ ಮುಖಗಳು ಬರುತ್ತಿವೆ. ಅವರನ್ನೆಲ್ಲಾ ನೋಡಲು ಖುಷಿಯೆನಿಸುತ್ತದೆ ಎಂದು ಹೇಳಿದ್ದಾರೆ. 

loader