ಗ್ಲಾಮರಸ್ ನಟಿಯರ ಪಟ್ಟಿಯಲ್ಲಿ ಸೇರುತ್ತಿರುವ ಜಾಹ್ನವಿ ಕಪೂರ್ ವಾಡ್ರೋಬ್‌ನಲ್ಲಿ ಏನಿದೆ ಎಂದು ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದಿದ್ದೇ. ಬಟ್ ಏನೇ ಆದ್ರೂ ನನ್ನ ಕಂಫರ್ಟ್ ಮುಖ್ಯವೆಂದು ಕಾಣಿಸಿಕೊಂಡ ಬಟ್ಟೆಯಲ್ಲೇ ಕಾಣಿಸಿಕೊಂಡಿದ್ದಾರೆ.

ಶ್ರೀದೇವಿ ಪುತ್ರಿ ಜಾಹ್ನವಿ ಬ್ಯೂಟಿ ಸೀಕ್ರೇಟ್ ಏನು..?

ಬಿ-ಟೌನ್ ಲಿಟಲ್ ಶ್ರೀದೇವಿ ಧರಿಸುವ ಬಟ್ಟೆಯ ಬಗ್ಗೆ ಸಾಕಷ್ಟು ಟ್ರೋಲ್‌ಗಳು ಹರಿದಾಡುತ್ತಿದ್ದವು. ಇಷ್ಟು ದಿನ ಐ ಡೊಂಟ್ ಕೇರ್ ಎಂದು ಹೇಳಿದವರು ಈಗ ಬಾಯಿ ಮುಚ್ಚುವಂತೆ ಉತ್ತರ ಕೊಟ್ಟಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ನಿರೂಪಕಿಯೊಬ್ಬರು ಜಾಹ್ನವಿ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದಾಗ 'ನಾನಿನ್ನೂ ಜೀವನದಲ್ಲಿ ಅಷ್ಟೊಂದು ಹಣ ಸಂಪಾದನೆ ಮಾಡಿಲ್ಲ. ದಿನವೂ ಒಂದೊಂದು ಹೊಸ ಬಟ್ಟೆ ಧರಿಸುವುದಕ್ಕೆ. ನಾನು ಇರುವುದರಲ್ಲಿ ಖುಷಿಯಾಗಿದ್ದೀನಿ. ಅವಶ್ಯಕತೆ ಇದ್ದಾಗ ಮಾತ್ರ ಖರ್ಚು ಮಾಡಬೇಕೆಂದು ತಾಯಿ ಹೇಳಿಕೊಟ್ಟಿದ್ದಾರೆ ' ಎಂದು ಉತ್ತರ ನೀಡಿದ್ದಾರೆ.