ಇತ್ತೀಚೆಗೆ ನಿಧನರಾದ ಜನಪ್ರಿಯ ಬಾಲಿವುಡ್ ನಟಿ ಸೌಂದರ್ಯದ ಖನಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್‌ ಮೊದಲ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಅವರ ಸೌಂದರ್ಯದ ಗುಟ್ಟೇನು ಎನ್ನುವ ವಿಚಾರವನ್ನು ಇದೀಗ ಬಯಲಾಗಿದೆ. 

ಮುಂಬೈ: ಇತ್ತೀಚೆಗೆ ನಿಧನರಾದ ಜನಪ್ರಿಯ ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್‌ರ ಮೊದಲ ಸಿನಿಮಾ ‘ಧಡಕ್’ ಕೆಲ ದಿನಗಳ ಹಿಂದೆ ತೆರೆ ಕಂಡಿದೆ. ಆಕೆಯ ಅಭಿನಯದ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿರಬ ಹುದು. ಆದರೆ ಜಾಹ್ನವಿ ಸೌಂದರ್ಯ ಹೊಗಳುವವರೇ ಹೆಚ್ಚು.

ಹಾಗಾದರೆ ಶ್ರೀದೇವಿ ಪುತ್ರಿ ಈ ಪರಿ ಸೌಂದರ್ಯ ಕಾಪಾಡಿ ಕೊಂಡಿರುವುದು ಹೇಗೆ? ‘ತಲೆಗೆ ಮೊಟ್ಟೆ, ಬಿಯರ್, ಮುಖಕ್ಕೆ ಹಣ್ಣುಗಳು’ ಎನ್ನುತ್ತಾರೆ ಜಾಹ್ನವಿ. ‘ನನ್ನ ತಲೆ ಗೂದಲಿಗೆ ತಿನ್ನುವ ಪದಾರ್ಥ ಗಳನ್ನು ಸಾಕಷ್ಟು ಹಚ್ಚು ತ್ತೇನೆ. ಮೊಟ್ಟೆ, ಬಿಯರ್, ಮೆಂತ್ಯ ಬಳಸುತ್ತೇನೆ’ ಎಂದು ಜಾಹ್ನವಿ ತಿಳಿಸಿದ್ದಾರೆ. 

View post on Instagram