ಆದರೆ ಸ್ವತಃ ಇವರಿಬ್ಬರ ಮದುವೆ ಬಗ್ಗೆ 36 ವರ್ಷದ ರೊಮೇನಿಯಾದ ನಟಿ ಲುಲಿಯಾ ಸತ್ಯಾಂಶ ತಿಳಿಸಿದ್ದಾರೆ.

ಇತ್ತೀಚಿಗೆ ಕೆಲವು ತಿಂಗಳುಗಳಿಂದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ ರೊಮೆನಿಯಾದ ನಟಿ, ವಾರ್ತಾ ಹಾಗೂ ಕಾರ್ಯಕ್ರಮ ನಿರೂಪಕಿಯಾದ 'ಲುಲಿಯಾ ವಂಟರ್' ಹೆಸರು ತುಂಬ ಕೇಳಿ ಬರುತ್ತಿದೆ. ಅಲ್ಲದೆ ಸಲ್ಲೂ ಹಾಗೂ ಲುಲಿಯಾ ಇನ್ನೇನು ಮದುವೆಯಾಗುತ್ತಾರೆ ಎಲ್ಲಡೆ ಹರಡುತ್ತಿರುವ ಬಿಸಿ ಬಿಸಿ ಗಾಳಿ ಸುದ್ದಿ.

ಆದರೆ ಸ್ವತಃ ಇವರಿಬ್ಬರ ಮದುವೆ ಬಗ್ಗೆ 36 ವರ್ಷದ ರೊಮೇನಿಯಾದ ನಟಿ ಲುಲಿಯಾ ಸತ್ಯಾಂಶ ತಿಳಿಸಿದ್ದಾರೆ.'ನನಗೆ ಈಗಾಗಲೇ ಮದುವೆಯಾಗಿದೆ. ಅಲ್ಲದೆ ಗಂಡನನ್ನು ತ್ಯಜಿಸಿದ್ದೇನೆ. ನಾನು ಭಾರತದಲ್ಲಿದ್ದಾಗ ಸಲ್ಮಾನ್ ಖಾನ್ ಇದ್ದ ಅಪಾರ್ಟ್'ಮೆಂಟ್'ನಲ್ಲಿ ವಾಸವಿದ್ದೆ. ಅವರ ಕುಟುಂಬದ ಜೊತೆ ಸಲ್ಮಾನ್ ಖಾನ್ ಅವರೊಂದಿಗೂ ಹೆಚ್ಚು ಆತ್ಮೀಯತೆಯಿತ್ತು. ಹಾಗಂತ ಮಾತ್ರಕ್ಕೆ ನಾನು ಆತನನ್ನು ಪ್ರೀತಿಸಿಯೂ ಇಲ್ಲ. ಆತನನ್ನು ಮದುವೆಯೂ ಆಗುವುದಿಲ್ಲ. ಇಲ್ಲಸಲ್ಲದ ಸುದ್ದಿಗಳಿಗೆ ಆಸ್ಪದ ಕೊಡಬೇಡಿ ಎಂದು' ಸಲ್ಲು ಪ್ರೀತಿಯ ಬಗ್ಗೆ ಇರುವ ಪ್ರೀತಿಯ ಬಗ್ಗೆ ತೆರೆಯೆಳೆದಿದ್ದಾಳೆ.