ಬಾಂಬೆ ಮೂಲದ ಕಂಪನಿಯಾಗಿರುವ ಇನ್ನೋವೇಟಿವ್ ಫಿಲಂ ಸಿಟಿ ಬಿಡದಿ ಸಮೀಪದಲ್ಲಿ 500ಕ್ಕೂ ಹೆಚ್ಚು ಪ್ರದೇಶದಲ್ಲಿ ನಿರ್ಮಾಣವಾಗಿದೆ.

ಬೆಂಗಳೂರು(ನ.16): ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್'ನ 4ನೇ ಆವೃತ್ತಿ ನಡೆಯುತ್ತಿರುವ ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಸೇರಿದಂತೆ ಕೆಲವು ಕಡೆ ಐಟಿ ದಾಳಿ ನಡೆದಿದೆ.

​ಇಂದು ಬೆಳಿಗ್ಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿ ಹಾಗೂ ಬಳ್ಳಾರಿ ರಸ್ತೆಯಲ್ಲಿರುವ ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ವೆಂಕಟವರ್ಧನ್ ಅವರ ಮನೆ ಮತ್ತು ಅವರ ಡಿಎನ್'ಎ ನೆಟ್'ವರ್ಕ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬಾಂಬೆ ಮೂಲದ ಕಂಪನಿಯಾಗಿರುವ ಇನ್ನೋವೇಟಿವ್ ಫಿಲಂ ಸಿಟಿ ಬಿಡದಿ ಸಮೀಪದಲ್ಲಿ 500ಕ್ಕೂ ಹೆಚ್ಚು ಪ್ರದೇಶದಲ್ಲಿ ನಿರ್ಮಾಣವಾಗಿದೆ. ಕಳೆದ ಆವೃತ್ತಿಯ ಸೇರಿದಂತೆ ಈ ಬಾರಿಯ ಸುದೀಪ್ ಆಯೋಜಿಸುತ್ತಿರುವ ಬಿಗ್'ಬಾಸ್ ರಿಯಾಲಿಟಿ ಶೋ ಅಲ್ಲಿಯೇ ನಡೆಯುತ್ತಿದೆ. 5 ಮಂದಿಯ ಅಧಿಕಾರಿಗಳ ತಂಡ ಫಿಲಂ ಸಿಟಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ'ಗೆ ವೆಂಕಟವರ್ಧನ್ ಆಪ್ತನಾಗಿದ್ದು, ಐಪಿಎಲ್ ವೇಳೆ ಅಪಾರ ಪ್ರಮಾಣದ ತೆರಿಗೆ ವಂಚನೆ ಆರೋಪ ಇವರ ಮೇಲಿದೆ.