ತಾಯಿ ಜೊತೆಯೇ ಸೀರಿಯಲ್ ನಟನ ಡೇಟಿಂಗ್

Is TV actor Harshad Arora dating his reel mother Aparna Kuma
Highlights

ಧಾರಾವಾಹಿ ನಟರೋರ್ವರು ತಮ್ಮ ತಾಯಿ ಜೊತೆಯಲ್ಲಿಯೇ ಡೇಟಿಂಗ್ ಮಾಡುತ್ತಿರುವುದು ಇದೀಗ ಎಲ್ಲೆಡೆ ಗಾಸಿಪ್ ಗೆ ಕಾರಣವಾಗಿದೆ. ಹಿಂದಿ ಕಿರುತೆರೆಯ ಮಾಯಾವಿ ಮಾಲಿಂಗ್ ಸೀರಿಯಲ್ ರೀಲ್ ತಾಯಿ ಮಗನ ಜೋಡಿ ಸುದ್ದಿ ಮಾಡುತ್ತಿದೆ. 

ಮುಂಬೈ :  ಕಿರುತೆರೆ ನಟನೋರ್ವ ತನ್ನ  ರೀಲ್ ತಾಯಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಕತ್ ಸುದ್ದಿಯಾಗುತ್ತಿದೆ. 

ಮಾಯಾವಿ ಮಾಲಿಂಗ್ ಎಂಬ ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿರುವ  ಹರ್ಷದ್ ಅರೋರಾ ಹಾಗೂ ಅಪರ್ಣಾ ಕುಮಾರ್ ಕ್ಯಾಮರಾ ಹಿಂದೆ ವಿಶೇಷ ಸ್ನೇಹವನ್ನು ಹೊಂದಿದ್ದಾರೆ ಎನ್ನಲಾಗಿದೆ. 

ಧಾರಾವಾಹಿಯ ಸೆಟ್ ನಲ್ಲಿಯೂ ಕೂಡ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಶೂಟಿಂಗ್ ಇಲ್ಲದ ವೇಳೆಯಲ್ಲಿಯೂ ಕೂಡ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಎಲ್ಲರ ಚಿತ್ತ ಅತ್ತ ಹರಿಯುವಂತೆ ಮಾಡಿದೆ.

ಇಬ್ಬರೂ ಕೂಡ ಈ ಧಾರವಾಹಿಯಲ್ಲಿ ತಾಯಿ ಮಗನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಅಪರ್ಣಾ ಇಂತಹ ಸುದ್ದಿಯನ್ನು ಕೇಳಿ ನೋವುಂಟಾಗಿದೆ. ನಾವಿಬ್ಬರೂ ಕೂಡ ದಿಲ್ಲಿ ಮೂಲದವರಾದ ಕಾರಣ  ಹೆಚ್ಚು ಆತ್ಮೀಯತೆಯಿಂದ ಇರುತ್ತೇವೆ. ಇಬ್ಬರೂ ಕೂಡ ಆಹಾರ ಪ್ರಿಯರಾಗಿದ್ದು ಹೆಚ್ಚು ಸುತ್ತಾಡುತ್ತೇವೆ. ನಮ್ಮ ಆತ್ಮೀಯವಾದ ಸ್ನೇಹದ ಬಗ್ಗೆ ಇಂತಹ ಮಾತುಗಳು ಕೇಳಿ ಬರುತ್ತಿರುವುದು ನೋವುಂಟು ಮಾಡಿದೆ ಎಂದಿದ್ದಾರೆ. 

ಇನ್ನು ಹರ್ಷದ್ ಕೂಡ ಪ್ರತಿಕ್ರಿಯೆ ನೀಡಿದ್ದು, ಅಪರ್ಣಾ ಹೆಚ್ಚು ಜೋವಿಯಲ್ ಆಗಿರುವ ಕಾರಣ ಅವರೊಂದಿಗೆ ತಮ್ಮ ಸ್ನೇಹ ಉತ್ತಮವಾಗಿದೆ ಎಮದು  ಹೇಳಿದ್ದಾರೆ. 

loader