ಅನುಷ್ಕಾ-ಪ್ರಭಾಸ್ ಮದ್ವೆ ಬಗ್ಗೆ ಅನುಷ್ಕಾ ಅಮ್ಮ ಏನಂತಾರೆ?
ಅನುಷ್ಕಾ ಶೆಟ್ಟಿ -ಪ್ರಭಾಸ್ ಬಗ್ಗೆ ಆಗಾಗ ರೂಮರ್ಸ್’ಗಳು ಕೇಳಿ ಬರ್ತಾನೇ ಇರುತ್ತೆ. ಇವರಿಬ್ಬರು ಮದುವೆಯಾಗ್ತಾರೆ ಅನ್ನೋ ಸುದ್ದಿ ಹೊಸದೇನಲ್ಲ. ಇದರ ಬಗ್ಗೆ ಅನುಷ್ಕಾ ಅಮ್ಮ ತುಟಿ ಬಿಚ್ಚಿದ್ದಾರೆ. ಹಾಗಾದ್ರೆ ಅನುಷ್ಕಾ-ಪ್ರಭಾಸ್ ಮದುವೆಯಾಗ್ತಾರಾ?
ಮುಂಬೈ (ಜು. 20): 'ಬಾಹುಬಲಿ' ಬಿಡುಗಡೆ ನಂತರ ಪ್ರಭಾಸ್ ಮತ್ತು ಅನುಷ್ಕಾ ಮದುವೆ ಬಗ್ಗೆ ಹಾರಿದಾಡಿದ ಗಾಸಿಪ್‌ಗಳು ಒಂದೆರಡಲ್ಲ. ತಾವಿಬ್ಬರೂ ಒಳ್ಳೆ ಸ್ನೇಹಿತರು ಎನ್ನೋ ಮೂಲಕ ಈ ಗಾಸಿಪ್ ಅನ್ನು ತಳ್ಳಿ ಹಾಕಲಾಗುತ್ತಿದ್ದರು, ಇವರಿಬ್ಬರ ನಡುವೆ ಏನೋ ಇದೆ ಅನ್ನೋ ಡೌಟ್ ಇದೆ. ಈಗ ಅನುಷ್ಕಾ ಅಮ್ಮ ಹೇಳಿಕೆ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತಿದೆ.
ಅನುಷ್ಕಾ ಶೆಟ್ಟಿ, ಪ್ರಭಾಸ್ ಇಬ್ಬರೂ ‘ಬಾಹುಬಲಿ’ ಚಿತ್ರದಲ್ಲಿ ಮಾಡಿದ ಮೋಡಿ ಎಲ್ಲಾ ಕಡೆಯೂ ವ್ಯಾಪಿಸಿತ್ತು. ಚಿತ್ರ ಭರ್ಜರಿ ಹಿಟ್ ಆಗುತ್ತಿದ್ದಂತೆಯೇ ಪ್ರಭಾಸ್ ಮತ್ತು ಅನುಷ್ಕಾ ಇಬ್ಬರೂ ಮದುವೆಯಾಗುತ್ತಾರೆ.
ಅಂತೂ ‘ಆ ವಿಷ್ಯ’ ಬಾಯ್ಬಿಟ್ಟ ಪ್ರಭಾಸ್..!ತೆರೆಯ ಮೇಲಿನ ಸೂಪರ್ ಜೋಡಿ ರಿಯಲ್ ಲೈಫಲ್ಲೂ ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳ ವಲಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಕ್ಕೆ ಸ್ವತಃ ಅನಿಷ್ಕಾ ಶೆಟ್ಟಿ ಪ್ರತಿಕ್ರಿಯೆ ನೀಡಿ ‘ನಮ್ಮಿಬ್ಬರ ನಡುವೆ ಇರುವುದು ಸ್ನೇಹ ಮಾತ್ರ, ಸೂಕ್ತ ಸಂದರ್ಭದಲ್ಲಿ ನನ್ನ ಮದುವೆ ನಿರ್ಧಾರ ಪ್ರಕಟ ಮಾಡುತ್ತೇನೆ’ ಎಂದು ಹೇಳಿಕೊಂಡಮೇಲೆ ಎಲ್ಲವೂ ತಣ್ಣಗಾಗಿತ್ತು.
ಪ್ರಭಾಸ್ ಅವರೊಂದಿಗಿನ ಬಂಧದ ಬಗ್ಗೆ ಅನುಷ್ಕಾ ಶೆಟ್ಟಿ ಹೇಳಿದ್ದೇನು?
ಆದರೆ ಈಗ ಅನುಷ್ಕಾ ತಾಯಿ ಹೇಳಿರುವ ಮಾತು ಈ ಜೋಡಿ ನಿಜವಾಯಿಗೂ ಸಪ್ತಪದಿ ತಿಳಿಯುತ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ‘ಅನುಷ್ಕಾ ಮತ್ತು ಪ್ರಭಾಸ್ ಇಬ್ಬರೂ ಸ್ಟಾರ್ ಗಳು. ಹಾಗಾಗಿ ಒಟ್ಟಿಗೆ ನಟಿಸಿದ್ದಾರೆ. ನನ್ನ ಪ್ರಕಾರ ಪ್ರಭಾಸ್ ಮಿ. ಪರ್ಫೆಕ್ಟ್. ಅನುಷ್ಕಾಗೆ ಸೂಪರ್ ಜೋಡಿ. ಆದರೆ ಅವರಿಬ್ಬರೂ ಈಗ ಒಳ್ಳೆಯ ಸ್ನೇಹಿತರು. ಮದುವೆ ಬಗ್ಗೆ ಈಗಲೇ ಏನನ್ನೂ ಮಾತಾಡುವುದು ಬೇಡ’ ಎಂದು ಹೇಳಿ ಪ್ರಭಾಸ್‌ಗೆ ಮಿ. ಪರ್ಫೆಕ್ಟ್ ಪಟ್ಟ ಕೊಟ್ಟುಬಿಟ್ಟಿದ್ದಾರೆ. ಇದರಿಂದ ಅನುಷ್ಕಾ ತಾಯಿಗೆ ಪ್ರಭಾಸ್‌ನನ್ನು ಅಳಿಯನನ್ನಾಗಿ ಕಾಣುವ ಆಸೆ ಇದೆಯಾ ಎನ್ನುವ ಅನುಮಾನ ಮೂಡಿದೆ. ಸದ್ಯ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಮತ್ತು ಮಗಳು ಅನುಷ್ಕಾ ಈ ಬಗ್ಗೆ ಏನು ಹೇಳುತ್ತಾರೆ ಎನ್ನುವ ಕುತೂಹಲ ಸದ್ಯಕ್ಕೆ ಜೋರಾಗಿಯೇ ಇದೆ.
ಅನುಷ್ಕಾ ಮತ್ತು ಪ್ರಭಾಸ್ ಇಬ್ಬರೂ ಸ್ಟಾರ್‌ಗಳು. ಹಾಗಾಗಿ ಒಟ್ಟಿಗೆ ನಟಿಸಿದ್ದಾರೆ. ನನ್ನ ಪ್ರಕಾರ ಪ್ರಭಾಸ್ ಮಿ. ಪರ್ಫೆಕ್ಟ್. ಅನುಷ್ಕಾಗೆ ಸೂಪರ್ ಜೋಡಿ. ಆದರೆ ಅವರಿಬ್ಬರೂ ಈಗ ಒಳ್ಳೆಯ ಸ್ನೇಹಿತರು. ಮದುವೆ ಬಗ್ಗೆ ಈಗಲೇ ಏನನ್ನೂ ಮಾತಾಡುವುದು ಬೇಡ.
- ಅನುಷ್ಕಾ ಶೆಟ್ಟಿ ತಾಯಿ