ಅಂತೂ ‘ಆ ವಿಷ್ಯ’ ಬಾಯ್ಬಿಟ್ಟ ಪ್ರಭಾಸ್..!

Prabhas speaks out about relationship with Anushka Shetty
Highlights

ಬಾಹುಬಲಿ-ದೇವಸೇನ ಮದುವೆ ಗುಲ್ಲು

ಅನುಷ್ಕಾ ಜೊತೆಗೆ ಮದುವೆ ಪ್ರಭಾಸ್ ಪ್ರತಿಕ್ರಿಯೆ

ಅಭಿಮಾನಿಗಳಿಗೆ ಪ್ರಭಾಸ್ ಹೇಳಿದ್ದೇನು?

ಅನುಷ್ಕಾ ಕೇವಲ ಫ್ರೆಂಡ್ ಅಂದಿದ್ದೇಕೆ?  
 

ಹೈದರಾಬಾದ್(ಜೂ.17): ಬಾಹುಬಲಿ ಖ್ಯಾತಿಯ ಟಾಲಿವುಡ್ ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ  ಮದುವೆಯಾಗ್ತಾರಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ. ಪ್ರಭಾಸ್ ಮತ್ತು ಅನುಷ್ಕಾ ಮದುವೆ ಕುರಿತು ಸಾಕಷ್ಟು ತರಹೇವಾರಿ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಈ ಕುರಿತು ಪ್ರಭಾಸ್ ಮತ್ತು ಅನುಷ್ಕಾ ಇದುವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ.

ಪ್ರಭಾಸ್ ಜೊತೆ ತಮ್ಮ ಮದುವೆ ಎಂಬುದೆಲ್ಲಾ ಸುಳ್ಳು, ಬಾಹುಬಲಿ ಮತ್ತು ದೇವಸೇನ ಜೋಡಿ ನಿಜ ಜೀವನದಲ್ಲೂ ಒಂದಾಗಲು ಸಾಧ್ಯವಿಲ್ಲ ಎಂದು ಅನುಷ್ಕಾ ಈ ಹಿಂದೆ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು. ಆದರೆ ಪ್ರಭಾಸ್ ಮಾತ್ರ ಈ ವಿಷಯದಲ್ಲಿ ತುಟಿ ಬಿಚ್ಚದೆ ಮೌನವಾಗಿದ್ದರು.

ಆದರೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಕೊನೆಗೂ ಪ್ರಭಾಸ್ ಈ ಕುರಿತಾದ ತಮ್ಮ ಮೌನವನ್ನು ಮುರಿದಿದ್ದಾರೆ. ಅನುಷ್ಕಾ ಜೊತೆಗಿನ ಮದುವೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಭಾಸ್ ಏಕಿಷ್ಟು ಆತುರಪಡುತ್ತೀರಿ?. ನಾನು ಮದುವೆಯಾಗುವ ಸಮಯ ಬಂದಾಗ ಖಂಡಿತ ನಿಮಗೆಲ್ಲಾ ತಿಳಿಸಿಯೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಆದರೆ ಮದುವೆ ಅನುಷ್ಕಾ ಅವರ ಜೊತೆಯೇ ಎಂಬ ಪ್ರಶ್ನೆಗೆ ಮಾತ್ರ ಸ್ಪಷ್ಟ ಉತ್ತರ ನೀಡದ ಪ್ರಭಾಸ್, ನಮ್ಮಿಬ್ಬರ ಮಧ್ಯೆ ಗೆಳೆತನ ಬಿಟ್ಟರೆ ಮತ್ತೇನೂ ಇಲ್ಲ ಎಂದು ಹೇಳಿ ನಗೆ ಬೀರಿದ್ದಾರೆ. 

loader