ಸೋಶಿಯಲ್ ಮೀಡಿಯಾದಲ್ಲಿ ಯಾವ ಕಾರಣಕ್ಕೆ, ಯಾವ ದಿನ ಯಾವುದು ಟ್ರೋಲ್ ಆಗುತ್ತೆ ಎಂದು ಹೇಳಲು ಸಾಧ್ಯವೇ ಇಲ್ಲ. ಫೋಟೋಶಾಪ್ ಮಾಡಿದ ಫೋಟೋಗಳನ್ನು ಶೇರ್ ಮಾಡಿದ್ದ ನಟಿ ಟ್ರೋಲಿಗರ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ.

ಸ್ವೀಡನ್ ಮೂಲದ 28 ವರ್ಷದ ನಟಿ ತಾನು ಪ್ಯಾರೀಸ್ ಗೆ ಭೇಟಿ ನೀಡಿದ್ದೇನೆ ಎಂದು ಬಿಂಬಿಸುವ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವವರ ಕಣ್ಣು ಸುಮ್ಮನಿರಬೇಕಲ್ಲ.

ಮೊದಲಿಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಇದು ಫೋಟೋಶಾಪ್ ಮಾಡಿದ ಫೋಟೋಗಳು ಎಂಬುದು ಸಾಬೀತಾಗಿ ಹೋಗಿದೆ. ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲರಾಗಿರುವವರು ತಮ್ಮ ಕೆಲಸ ಆರಂಭಿಸಿದ್ದಾರೆ.

ಬಿಕಿನಿ ಪೋಟೋಕ್ಕೆ ಟ್ರೋಲ್ ಮಾಡಿದವರ ಚಳಿ ಬಿಡಿಸಿದ ಕವಿತಾ!

ಐದು ಲಕ್ಷಕ್ಕೂ ಅಧಿಕ ಇಸ್ಟಾಗ್ರಾಮ್ ಫಾಲೋವರ್ ಗಳನ್ನು ಹೊಂದಿರುವ ಮಾಡೆಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ನಾನು ನಿಜಕ್ಕೂ ಪ್ಯಾರೀಸ್ ಗೆ ಭೇಟಿ ನೀಡಿದ್ದೆ. ಆದರೆ ತೆಗೆದುಕೊಂಡ ಫೋಟೋ ಅಷ್ಟೂ ಹಿಡಿಸಲಿಲ್ಲ. ಚಿತ್ರದ ಬ್ಯಾಕ್ ಗ್ರೌಂಡ್ ಬದಲಾಯಿಸಬೇಕು ಎಂಬ ಭಾವನೆ ಬಂತು. ಆ ಕಾರಣಕ್ಕೆ ಫೋಟೋ ಶಾಪ್ ಮಾಡಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಫೋಟೋ ಶಾಪ್ ಮಾಡಿದ ನಟಿಗೆ ಸೋಶಿಯಲ್ ಮೀಡಿಯಾ ಮಾತ್ರ ಸರಿಯಾಗಿಯೇ ಝಾಡಿಸಿದೆ.

View post on Instagram
View post on Instagram